ಕಾರ್ಕಳ : ಮಾಳ ಗ್ರಾಮ ಪಂಚಾಯತ್ ವತಿಯಿಂದ ಪಂಚಾಯತ್ ವಿಶೇಷ ಅನುದಾನದಲ್ಲಿ ಮಾಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸುಮಾರು 2.25 ಲಕ್ಷ ರೂ. ಗಳ CBC ANALISER ಎಂಬ ಎಲ್ಲಾ ಮಾದರಿಯ ರಕ್ತಪರೀಕ್ಷೆ ಯ ಉಪಕರಣವನ್ನು ಮಾಳ ಪಂಚಾಯತ್ ಅಧ್ಯಕ್ಷ ಉಮೇಶ್ ಪೂಜಾರಿ ಇವರು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ದಿಶಾ ಕಿಶನ್, ತಾಲೂಕು ಆರೋಗ್ಯಾಧಿಕಾರಿ ಸಂದೀಪ್ ಕುಡ್ವ, ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ವಿಮಲಾ, ಅಶೋಕ್ ಬರ್ವೇ,ಅಜಿತ್ ಹೆಗ್ಡೆ, ಶ್ರೀಮತಿ ನೀಲು, ಅನಿಲ್ ಎಸ್ ಪೂಜಾರಿ, ರಘುರಾಮ್ ಶೆಟ್ಟಿ,ದಿನೇಶ್ ಶೆಟ್ಟಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್, ಹಾಗು ಶಿರ್ಲಾಲು ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಭಾರತಿ ದೇವಾಡಿಗ, ರಮಾನಂದ ಪೂಜಾರಿ, ಸದಾನಂದ ಸಾಲಿಯಾನ್ ಹಾಗೂ ಎಲ್ಲಾ ಗ್ರಾಮದ ಪಂಚಾಯತ್ ಸದಸ್ಯರುಗಳು ಗ್ರಾಮಸ್ಥರು ಉಪಸ್ಥಿತರಿದ್ದರು.
ಮಾಳ, ಶಿರ್ಲಾಲು ಕೆರ್ವಾಷೆ ಮತ್ತು ಮುಂಡ್ಲಿ ಗ್ರಾಮದ ಗ್ರಾಮಸ್ಥರು ಇದರ ಪ್ರಯೋಜನ ಪಡೆಯಬೇಕಾಗಿ ಮಾಳ ಗ್ರಾಮ ಪಂಚಾಯತ್ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
`