ಅಜೆಕಾರು: ಯಕ್ಷ ಮಿತ್ರರು ದೊಂಡೇರಂಗಡಿ ಇವರ ಆಯೋಜನೆಯ ಮೂರನೇ ವರ್ಷದ ಯಕ್ಷ ಸ್ನೇಹ ಸಮ್ಮಿಲನ ಕಾರ್ಯಕ್ರಮವು ದೊಂಡೇರಂಗಡಿ ಶ್ರೀ ರಾಮಮಂದಿರದ ಅಯೋಧ್ಯಾ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಆರಂಭದಲ್ಲಿ ಉಡುಪಿ ಜಿಲ್ಲೆಯ ಹೆಸರಾಂತ ಹವ್ಯಾಸಿ ಭಾಗವತರಿಂದ ಗಾನವೈಭವ ನಡೆಯಿತು. ಬಳಿಕ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದರಾದ ಮಹಾಬಲ ನಾಯ್ಕ ಬುಕ್ಕಿಗುಡ್ಡೆ ಮತ್ತು ರಘನಾಥ ನಾಯಕ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕೃಷ್ಣ ಶೆಣೈ ದೊಂಡೇರಂಗಡಿ,ದಿನೇಶ್ ಶೆಟ್ಟಿ,ಪ್ರಕಾಶ್ ಕಿರಾಡಿ,ದಯಾನಂದ ಹೆಗ್ಡೆ,ಕರುಣಾಕರ ಶೆಟ್ಟಿ ಕಾವಾಡಿ,ಬಾಲಕೃಷ್ಣ ಆಚಾರ್ಯ ಮುನಿಯಾಲು ಉಪಸ್ಥಿತರಿದ್ದರು.
ಅರುಣ್ ಶೆಟ್ಟಿ ಸ್ವಾಗತಿಸಿದರು. ವಿನಯ ಆರ್ ಭಟ್ ನಿರೂಪಿಸಿ ವಂದಿಸಿದರು.
ಬಳಿಕ ಮೇಳದ ಹಾಗೂ ಹವ್ಯಾಸಿ ಕಲಾವಿದರ ಕೂಡುವಿಕೆಯಲ್ಲಿ ವೀರ ವೃಷಸೇನ-ಕರ್ಣಾರ್ಜುನ ಕಾಳಗ ಎನ್ನುವ ಯಕ್ಷಗಾನ ಪ್ರದರ್ಶನಗೊಂಡಿತು.
`