Share this news

 

ಕಾರ್ಕಳ : ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿದ್ದ ಇರ್ವತ್ತೂರು ಉದಯ ಎಸ್. ಕೋಟ್ಯಾನ್ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಹಿನ್ನಲೆಯಲ್ಲಿ ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟನೆ ನಡೆಸಿದ ಬೆನ್ನಲ್ಲೇ ಇರ್ವತ್ತೂರು ಗ್ರಾಮ ಪಂಚಾಯತಿಯ 6 ಮಂದಿ ಸದಸ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಉದಯ ಕೋಟ್ಯಾನ್ ಬಣದ ಪಂಚಾಯತ್ ಉಪಾಧ್ಯಕ್ಷೆ ದೀಪಾ ಶ್ರೀನಾಥ್, ಸದಸ್ಯರಾದ ಶೇಖರ್ ಅಂಚನ್, ಬಾಲಕೃಷ್ಣ ಶೆಟ್ಟಿ, ಕವಿತಾ ಶಂಕರ್, ಅನಿತಾ ಕುಲಾಲ್,ಲಲಿತಾ ನಾಯ್ಕ ಪಂಚಾಯತಿ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಬಿಜೆಪಿ ಬೆಂಬಲಿತ ಸಹಕಾರ ಭಾರತಿಯಿಂದ ದ.ಕ ಹಾಲು ಒಕ್ಕೂಟದ ನಿರ್ದೇಶಕ ಮಂಡಳಿಯ ಚುನಾವಣೆಗೆ ಕಾರ್ಕಳ ಕ್ಷೇತ್ರದಿಂದ ಸ್ಪರ್ಧೆಗೆ ಉದಯ ಕೋಟ್ಯಾನ್ ಪ್ರಬಲ ಆಕಾಂಕ್ಷಿಯಾಗಿದ್ದರು.ಆದರೆ ಪಕ್ಷ ಅವರಿಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಅವರ ಹಿರಿಯ ಸಹೋದರ ಭಾಸ್ಕರ ಕೋಟ್ಯಾನ್ ಅವರ ಸಹಕಾರದಿಂದ ಸಹಕಾರಿ ಧುರೀಣರ ಮುತುವರ್ಜಿಯಿಂದ ಕಾಂಗ್ರೆಸ್ ಬೆಂಬಲಿತ ಹೈನುಗಾರರ ಬಳಗ ತನ್ನ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿತ್ತು. ಬಿಜೆಪಿಗೆ ಸೆಡ್ಡು ಹೊಡೆದು ಗೆಲ್ಲಲೇಬೇಕೆಂಬ ಪಣತೊಟ್ಟು ಚುನಾವಣೆಯಲ್ಲಿ ಉದಯ ಕೋಟ್ಯಾನ್ ಗೆದ್ದು ಬೀಗಿದ್ದರು. ಮಾತ್ರವಲ್ಲದೇ ಕಾರ್ಕಳದ ಎರಡೂ ಕ್ಷೇತ್ರವನ್ನು ಕಾಂಗ್ರೆಸ್ ತನ್ನದಾಗಿಸಿಕೊಂಡಿತ್ತು. ಇತ್ತ ಗೆದ್ದ ಖುಷಿಯಲ್ಲಿದ್ದ ಉದಯ ಕೋಟ್ಯಾನ್ ತನ್ನ ಉಚ್ಚಾಟನೆಗೆ ಪ್ರತಿಯಾಗಿ ತನ್ನ ಬಣದ 6 ಜನ ಗ್ರಾಮ ಪಂಚಾಯತ್ ಸದಸ್ಯರ ರಾಜೀನಾಮೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನುವುದು ಅಷ್ಟೇ ಸತ್ಯ.
ಒಟ್ಟಿನಲ್ಲಿ ಉದಯ ಕೋಟ್ಯಾನ್ ಉಚ್ಚಾಟನೆ ಬಿಜೆಪಿಗೆ ಯಾವುದೇ ಲಾಭವಾಗಿಲ್ಲ ಬದಲಾಗಿ ತನ್ನ 6 ಜನ ಬೆಂಬಲಿತ ಸದಸ್ಯರನ್ನು ಕಳೆದುಕೊಳ್ಳುವ ಭೀತಿ ಎದುರಾಗಿದೆ.

 

 

 

 

 

 

 

 

 

 

Leave a Reply

Your email address will not be published. Required fields are marked *