Share this news

ಕಾರ್ಕಳ: 2024-25ನೇ ಸಾಲಿಗೆ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಳಿಗೆ ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ಜುಲೈ 5 ರವರೆಗೆ ವಿಸ್ತರಿಸಲಾಗಿದೆ.ಈ ಹಿಂದೆ ಜುಲೈ1 ಕೊನೆಯ ದಿನಾಂಕವಾಗಿತ್ತು. ಇದೀಗ ಮತ್ತೆ ಬೆಳೆವಿಮೆಗೆ ಅವಕಾಶ ಕಲ್ಪಿಸಲಾಗಿದ್ದು,ಎಲ್ಲಾ ಗ್ರಾಮ ಪಂಚಾಯತ್ ಹಾಗೂ ಕಾರ್ಕಳ ಪುರಸಭಾ ವ್ಯಾಪ್ತಿಗೆ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಳಿಗೆ ವಿಮಾ ಸೌಲಭ್ಯ ದೊರಕಲಿದೆ.

ಪ್ರತಿ ಹೆಕ್ಟೇರ್ ಅಡಿಕೆ ಬೆಳೆಗೆ ರೂ1.28 ಲಕ್ಷ ವಿಮಾ ಮೊತ್ತವಾಗಿದ್ದು, ರೈತರು ರೂ.6400 ವಿಮಾ ಕಂತು ಪಾವತಿಸಬೇಕು ಹಾಗೂ ಪ್ರತೀ ಹೆಕ್ಟೇರ್ ಕಾಳುಮೆಣಸು ಬೆಳೆಗೆ ರೂ.47000 ವಿಮಾ ಮೊತ್ತವಾಗಿದ್ದು ರೈತರು ರೂ.2350 ವಿಮಾ ಕಂತು ಪಾವತಿಸಬೇಕಾಗುತ್ತದೆ.

ವಿಮಾ ನೊಂದಾವಣೆಗೆ ಜುಲೈ.5 ಅಂತಿಮ ದಿನಾಂಕವಾಗಿದ್ದು, ಆಸಕ್ತ ರೈತರು ತಮ್ಮ ಬೆಳೆ ಸಾಲ ಪಡೆದ ಬ್ಯಾಂಕ್/ಸೊಸೈಟಿಯನ್ನು ಸಂಪರ್ಕಿಸಬಹುದು. ಬೆಳೆ ಸಾಲ ಹೊಂದಿರದ ರೈತರು ತಮ್ಮ ಉಳಿತಾಯ ಖಾತೆ ಇರುವ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದಾಗಿದೆ. 9449440812 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸುವಂತೆ ಕಾರ್ಕಳ ತೋಟಗಾರಿಕಾ ಇಲಾಖೆಯ ಪ್ರಕಟಣೆ ತಿಳಿಸಿದೆ.

                        

                          

                        

                          

 

Leave a Reply

Your email address will not be published. Required fields are marked *