Share this news

ಮಂಗಳೂರು : ಹಿಂದೂ ಮುಖಂಡ ಸುಹಾಸ್ ಶೆಟ್ಟಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆಗೈದ ಪ್ರಕರಣಕ್ಕೆ ಕುರಿತಂತೆ NIA ತನಿಖೆ ಮುಂದುವರಿಸಿದ್ದು, ಸುಹಾಸ್ ಹತ್ಯೆಗೆ ವಿದೇಶದಿಂದ ಫಂಡಿಂಗ್ ಮಾಡಲಾಗಿದೆ ಎನ್ನುವ ಸ್ಪೋಟಕ ಮಾಹಿತಿ ಬಯಲಾಗಿದೆ.

ಸಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಈವರೆಗೂ ಸುಮಾರು 15ಕ್ಕೂ ಹೆಚ್ಚು ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ.ಈ ಪೈಕಿ ಹತ್ಯೆಯಲ್ಲಿ ಭಾಗಿಯಾದ ಬಹುತೇಕ ಕೊಲೆ ಆರೋಪಿಗಳಿಗೆ ನಿಷೇಧಿತ PFI ನಂಟು ಇರುವುದು ತನಿಖೆಯಲ್ಲಿ ದೃಢಪಟ್ಟಿದೆ ಎಂದು NIA ಮೂಲಗಳು ತಿಳಿಸಿವೆ. ಬಂಧಿತರ ಬ್ಯಾಂಕ್ ಖಾತೆಗಳಿಗೆ ವಿದೇಶಗಳಿಂದ ಫಂಡಿಂಗ್ ಹಣಕಾಸಿನ ನೆರವು ಬರುತ್ತಿತ್ತು. 12 ಆರೋಪಿಗಳ ಬ್ಯಾಂಕ್ ಖಾತೆಯ ವಿವರವನ್ನು NIA ತಂಡ ಸಂಗ್ರಹಿಸಿದೆ. NIA ಡಿಐಜಿ ರಾಹುಲ್, ಎಸ್ಪಿ ಶಿವಕುಮಾರ್ ಡಿವೈಎಸ್.ಪಿ ಪವನ್ ಕುಮಾರ್ ನೇತೃತ್ವದಲ್ಲಿ ತನಿಖೆ ಮುಂದುವರೆದಿದೆ.

 

 

 

Leave a Reply

Your email address will not be published. Required fields are marked *