ಕಾರ್ಕಳ: ನುಡಿಯುವುದು ಮಾತ್ರವಲ್ಲ.,ಅದರಂತೆ ಬದುಕಿ ತೋರಿಸಿದ ಗಾಂಧೀ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಯವರ ಜೀವನ ಅವರ ಬದುಕೇ ಬಿಳಿ ಹಾಲಿನಂತೆ ಪರಿಶುದ್ಧವಾಗಿತ್ತು.ನುಡಿದಂತೆ ನಡೆದ ವ್ಯಕ್ತಿಗಳು ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರಿ ಜೀ.,ಅವರ ಜೀವನ ನಮಗೆ ಆದರ್ಶವಾಗಬೇಕು ಎಂದು ಪಿ.ಎಂ.ಶ್ರೀ.ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ಶಿಕ್ಷಕ ರಾಧಾಕೃಷ್ಣ ಜೋಶಿ ತಿಳಿಸಿದರು.
ಅವರು ಮಾಳ ಕೂಡಬೆಟ್ಟು ಪಿ.ಎಂ.ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಶ್ರೀಮತಿ ವಿಜಯಾ ಬಾಲಕೃಷ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಎಸ್ ಡಿ ಎಂ ಸಿ ಸದಸ್ಯರು,ಶಿಕ್ಷಕರು,ಪಾಲಕರು,ಮಕ್ಕಳು ಕಾರ್ಯಕ್ರಮದಲ್ಲಿ ಹಾಜರಿದ್ದರು.ಶಿಕ್ಷಕರು ಸೇರಿದಂತೆ ಹಾಜರಿದ್ದ ಎಲ್ಲಾ ಗಣ್ಯರು ಗಾಂಧೀ ಮತ್ತು ಶಾಸ್ತ್ರಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಸಂವಿಧಾನದ ಪೀಠಿಕೆ ಓದಲಾಯಿತು.ಮಕ್ಕಳು ಗಾಂಧಿ ಮತ್ತು ಶಾಸ್ತ್ರಿಯವರ ಜೀವನಚರಿತ್ರೆಯನ್ನು ತಿಳಿಸಿದರು.
ಹಿರಿಯ ಶಿಕ್ಷಕ ರಾಧಾಕೃಷ್ಣ ಜೋಶಿ ಕಾರ್ಯಕ್ರಮ ನಿರ್ವಹಿಸಿದರು.