ಕಾರ್ಕಳ: ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿಗಾಗಿ ಪಟ್ಟಿ ಮಾಡಿದ ಜಾತಿಗಳ ಯಾದಿಯಲ್ಲಿ ಹಿಂದು ಉಪಜಾತಿಗಳ ಜತೆಗೆ ಮತಾಂತರಗೊಂಡ ಕ್ರಿಶ್ಚಿಯನ್ ಹೆಸರುಗಳನ್ನು ಕೈಬಿಟ್ಟಿರುವುದು ನಮ್ಮ ಹೋರಾಟಕ್ಕೆ ಸಂದ ಜಯ ಎಂದು ಶಾಸಕ ಸುನಿಲ್ ಕುಮಾರ್ ಹೇಳಿದ್ದಾರೆ.
ಒಟ್ಟು 46 ಇಂಥ ಹೊಸ ಜಾತಿಗಳ ಸೃಷ್ಟಿ ಕಾಯಕ ಸಮುದಾಯಗಳ ಮತಾಂತರ ಕ್ಕೆ ಇಂಬು ನೀಡುವ ಜತೆಗೆ ಭವಿಷ್ಯದಲ್ಲಿ ಮೀಸಲು ವ್ಯವಸ್ಥೆಯನ್ನು ಛಿದ್ರಗೊಳಿಸುವ ಅಪಾಯವಿತ್ತು. ಎರಡು ದಿನಗಳ ಹಿಂದೆ 33 ಜಾತಿಗಳನ್ನು ಈ ಪಟ್ಟಿಯಿಂದ ಕೈ ಬಿಟ್ಟ ಆಯೋಗ ಈಗ ಪರಿಶಿಷ್ಟ ಜಾತಿಗಳಲ್ಲಿ ಸೇರ್ಪಡೆಯಾಗಿದ್ದ 14 ಜಾತಿಗಳನ್ನು ಕೈ ಬಿಟ್ಟಿದೆ. ಇದು ನಮ್ಮ ಹೋರಾಟಕ್ಕೆ ಸಂದ ಜಯವಾಗಿದ್ದು, ಇನ್ನಾದರೂ ಯಾವುದೇ ಅಪಸವ್ಯವಿಲ್ಲದೇ ಆಯೋಗ ಸಮೀಕ್ಷೆ ನಡೆಸಲಿ. ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಲಿ ಎಂದು ಅವರು ಹೇಳಿದ್ದಾರೆ.