ಕಾರ್ಕಳ: ಕಾರ್ಕಳ ತಾಲೂಕಿನಾದ್ಯಂತ ಸುರಿದ ಭಾರೀ ಗಾಳಿ ಮಳೆಗೆ ವಾಸದ ಮನೆಗಳಿಗೆ ಮರ ಬಿದ್ದು ಅಪಾರ ಹಾನಿ ಸಂಭವಿಸಿದೆ.
ನೀರೆ ಗ್ರಾಮದ ರಾಘವೇಂದ್ರ ಆಚಾರ್ಯ ಎಂಬವರ ಮನೆಗೆ ಮಂಗಳವಾರ ಗಾಳಿ ಮಳೆಯ ವೇಳೆ ಮರ ಬಿದ್ದು, ಅಂದಾಜು 10,000 ರೂ. ನಷ್ಟವಾಗಿದೆ. ನಿಟ್ಟೆ ಗ್ರಾಮದ ತಾನದಗುಡ್ಡೆ ಎಂಬಲ್ಲಿ ನಿವಾಸಿ ಕೆಂಚಮ್ಮ ಎಂಬವರ ವಾಸ್ತವ್ಯದ ಮನೆಗೆ ಮರ ಬಿದ್ದು ಹಾನಿ ಅಂದಾಜು 20,000 ರೂ. ನಷ್ಟವಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.