ಹೆಬ್ರಿ: ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಕುಚ್ಚೂರಿನಲ್ಲಿ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಬುಧವಾರ ನಡೆದಿದೆ.
ಕುಚ್ಚೂರು ನಿವಾಸಿ ಗಣಪ(56ವ) ಮೃತಪಟ್ಟವರು. ಗಣಪ ಅವರಿಗೆ ಬಿಪಿ ಸಮಸ್ಯೆಯಿದ್ದು ಚಿಕಿತ್ಸೆ ಪಡೆಯುತ್ತಿದ್ದರು. ಹೆಬ್ರಿಯ ಕೋಳಿ ಅಂಗಡಿಯೊAದರಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಅವರು ಬುಧವಾರ ಹೋಟೆಲ್ ವೊಂದಕ್ಕೆ ಕೋಳಿಮಾಂಸ ಕೊಟ್ಟು ವಾಪಾಸಾಗುತ್ತಿದ್ದಾಗ ಏಕಾಏಕಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಹೆಬ್ರಿ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಆಸ್ಪತ್ರೆ ತಲುಪುವ ವೇಳೆಗಾಗಲೇ ಗಣಪ ಮೃತಪಟ್ಟಿದ್ದರು.
ಈ ಕುರಿತು ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.