Share this news

 

ಹೆಬ್ರಿ: ಬಾಯಿಯ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಹೆಬ್ರಿಯ ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಹೆಬ್ರಿಯ ಲಲಿತಾ (60 ವರ್ಷ) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.

ಲಲಿತಾ ಅವರು ತಂಬಾಕು ಸೇವಿಸುತ್ತಿದ್ದ ಕಾರಣ ಅವರಿಗೆ ಬಾಯಿಯ ಕ್ಯಾನ್ಸರ್ ಉಂಟಾಗಿದ್ದು, ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿದ್ದರೂ ವಾಸಿಯಾಗಿರಲಿಲ್ಲ. ಬಾಯಿಯ ಇನ್ನೊಂದು ಭಾಗಕ್ಕೆ ಕೂಡಾ ಶಸ್ತçಚಿಕಿತ್ಸೆ ಮಾಡಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದರು. ಆದ್ದರಿಂದ ತಮಗಿರುವ ಖಾಯಿಲೆಗೆ ಮನನೊಂದು ಲಿಲಿತಾ ಅವರು ಜೂ.6 ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಸಿದ್ದರೂ ಚಿಕಿತ್ಸೆಗೆ ಸ್ಪಂದಿಸದೆ ಜೂ.9 ರಂದು ಮೃತಪಟ್ಟಿದ್ದಾರೆ.
ಈ ಕರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

 

 

 

Leave a Reply

Your email address will not be published. Required fields are marked *