ಹೆಬ್ರಿ: ಹೆಬ್ರಿ ತಾಲೂಕು ಬೆಳಂಜೆ ಗ್ರಾಮದ ಸುರೇಂದ್ರ ಎಂಬವರ ಅಣ್ಣ ಸುಬ್ಬಣ್ಣ (52 ವರ್ಷ) ಎಂಬವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸುಬ್ಬಣ್ಣ ಕೂಲಿ ಕೆಲಸ ಮಾಡಿಕೊಂಡಿದ್ದು ಆಗಸ್ಟ್ 20 ರಂದು ಸಂಜೆ ಯಾವುದೋ ವಿಚಾರದಲ್ಲಿ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ಮಾನಸಿಕ ಖಿನ್ನತೆಗೆ ಒಳಗಾಗಿ ಬೆಳಂಜೆ ಗ್ರಾಮದ ಜಾರ್ಮಕ್ಕಿ ಎಂಬಲ್ಲಿರುವ ಮನೆಯ ಕೊಟ್ಟಿಗೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
























`
