Share this news

ಹೆಬ್ರಿ: ಹೆಣ್ಣು ಅಬಲೆ ಅಲ್ಲ, ಸಬಲೆ. ಹೆಣ್ಣಿಗೆ ರಕ್ಷಣೆ ಅವಳ ಕಷ್ಟಕಾಲದಲ್ಲಿ ಮಾತ್ರವೇ ಆಗಬೇಕು. ರಕ್ಷಾಬಂಧನ ಕಾಲದಲ್ಲಿ ರಕ್ಷಾಬಂಧನದ ಮೂಲಕ ಅಣ್ಣ ತಂಗಿಯರ  ಸಂಬಂಧ ಸದೃಢಗೊಳ್ಳುತ್ತದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ ಇದನ್ನು ಸಮಾಜ ಮುಖ್ಯವಾಗಿ ಪ್ರಚಾರ ಪಡಿಸುತ್ತಿದೆ. ರಕ್ಷಾಬಂಧನ ಮಹಾಭಾರತದ ಶ್ರೀ ಕೃಷ್ಣನ ಕಥೆಯಲ್ಲಿ ನಮಗೆ ತಿಳಿದು ಬರುತ್ತದೆ. ಇತಿಹಾಸದಲ್ಲಿಯೂ ಹಲವಾರು ಸಂದರ್ಭಗಳಲ್ಲಿ ರಕ್ಷೆಯ ಬಂಧನದ ಕಥೆಗಳನ್ನು ಓದಿದ್ದೇವೆ. ಅಮೃತ ಭಾರತಿ ಸಂಸ್ಥೆಯಲ್ಲಿ ಕಲಿಯುತ್ತಿರುವ ನೀವೆಲ್ಲರೂ ಪುಣ್ಯವಂತ ವಿದ್ಯಾರ್ಥಿಗಳು ಎಂದು ಸಮಾಜ ಸೇವಕಿ, ಉದ್ಯಮಿ ಶ್ರೀಮತಿ ರಮಿತಾ ಶೈಲೇಂದ್ರ ಕಾರ್ಕಳ ನುಡಿದರು.

ಅವರು ಹೆಬ್ರಿ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ವಿದ್ಯಾಲಯದ ಅನ್ನಪೂರ್ಣ ಸಭಾಂಗಣದಲ್ಲಿ ಇಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದಲ್ಲಿ ಆಚರಿಸಿದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದರು.

ವೇದಿಕೆಯಲ್ಲಿ ಅಮೃತ ಭಾರತಿ ಟ್ರಸ್ಟ್ ನ ಸ್ಥಾಪಕ ಅಧ್ಯಕ್ಷ ಸತೀಶ್ ಪೈ ಹೆಬ್ರಿ , ಸದಸ್ಯ ಲಕ್ಷ್ಮಣ್ ಭಟ್ ಶಿವಪುರ, ಗ್ರಾಮ ವಿಕಾಸ ಸಂಯೋಜಕ ಉಡುಪಿ ಜಿಲ್ಲೆ ಗುರುರಾಜ್ ಕಿಣಿ ,ಸಂಸ್ಥೆಯ ಮುಖ್ಯೋಪಾಧ್ಯಾಯನಿಯರಾದ ಶ್ರೀಮತಿ ಅಪರ್ಣ ಆಚಾರ್ಯ, ಶಕುಂತಲಾ. ಸಂಸ್ಥೆಯ ಉಪಮುಖ್ಯೋಪಾಧ್ಯಾಯ ಮಹೇಶ ಹೈಕಾಡಿ, ಸಮಾಜ ಶಿಕ್ಷಕರು ಸುಮನ್ ಗುರೂಜಿ, ದೈಹಿಕ ಶಿಕ್ಷಣ ಶಿಕ್ಷಕರು ಪ್ರವೀಣ ಹೆಗ್ಡೆ, ನಿಶಾನ್ ಶೆಟ್ಟಿ ಸಂಸ್ಕೃತ ಗುರೂಜಿ ವೇದವ್ಯಾಸ ತಂತ್ರಿ ಉಪಸ್ಥಿತರಿದ್ದರು.
ಸಂಸ್ಥೆಯ ಮಾತಾಜಿಯವರು ಅತಿಥಿಗಳಿಗೆ ಮತ್ತು ಗುರುಜಿಯವರಿಗೆ ರಕ್ಷೆಯನ್ನು ಕಟ್ಟಿ ಶುಭಾಶಯಗಳು ತಿಳಿಸಿದರು .

ಕಾರ್ಯಕ್ರಮದಲ್ಲಿ ಭಾಗವಹಿಸಿದ ಅತಿಥಿಗಳು ಭಾರತ ಮಾತೆಗೆ ಭಾವಚಿತ್ರಕ್ಕೆ ರಕ್ಷೆಯನ್ನು ಕಟ್ಟಿ ರಕ್ಷಾಬಂಧನದ ಶುಭಾಶಯಗಳು ಸಲ್ಲಿಸಿದರು. ರಕ್ಷಾಬಂಧನದ ಸಂದೇಶವನ್ನು ಮಹೇಶ್ ಹೈಕಾಡಿ ವಾಚಿಸಿದರು. ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸಾಮೂಹಿಕವಾಗಿ ರಕ್ಷಾ ಬಂಧನದ ಆಚರಣೆಯನ್ನು ರಕ್ಷೆ ಕಟ್ಟುವುದರ ಮೂಲಕ ಆಚರಿಸಲಾಯಿತು.ಸಂಸ್ಥೆಯ ವಿದ್ಯಾರ್ಥಿಗಳು ಹೆಬ್ರಿಪೇಟೆಯಲ್ಲಿ ತಿರುಗಿ ಅಂಗಡಿ ಮುಗ್ಗಟ್ಟುಗಳಲ್ಲಿರುವ ಎಲ್ಲಾ ಜನರಿಗೂ ರಾಖಿಯನ್ನ ಕಟ್ಟಿ ರಕ್ಷಾಬಂಧನದ ಶುಭಾಶಯಗಳು ತಿಳಿಸಿದರು. ಸೌಪರ್ಣಿಕ ಮಾತಾಜಿ ಸ್ವಾಗತಿಸಿ, ಸುಚಿತ್ರ ಮಾತಾಜಿ ಧನ್ಯವಾದವಿತ್ತರು. ಪಂಚಮಿ ಮಾತಾಜಿ ನಿರೂಪಿಸಿದರು.

                        

                          

                        

                          

 

`

Leave a Reply

Your email address will not be published. Required fields are marked *