ಹೆಬ್ರಿ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಭಾನುವಾರ ಶಾರದಾ ಪೂಜೆ ನೆರವೇರಿಸಲಾಯಿತು. ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಬಚ್ಚಪ್ಪು ಹಾಗೂ ಬನಶಂಕರಿ ಭಜನಾ ಮಂಡಳಿ ಮುಳ್ಳುಗುಡ್ಡೆ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಪ್ರೌಢಶಾಲೆಯ ಸಂಸ್ಕೃತ ಶಿಕ್ಷಕ ವಿದ್ವಾನ್ ವೇದವ್ಯಾಸ ತಂತ್ರಿ ಮಡಾಮಕ್ಕಿ ಪೂಜೆಯನ್ನು ನೆರವೇರಿಸಿ ಶಾರದಾ ದೇವಿಯು ಪ್ರತಿಯೊಬ್ಬ ವ್ಯಕ್ತಿಯ ಯಶಸ್ಸಿಗೆ ಕಾರಣೀಕರ್ತಳು. ಕೈಗಳಲ್ಲಿ ವೀಣೆ ಮತ್ತು ಪುಸ್ತಕ ಧರಿಸಿ ಶಾರದಾ ದೇವಿಯು ಮಾನಸಿಕ ಸಂತೋಷವನ್ನು ನೀಡಿ ಉತ್ತಮ ಸಂಸ್ಕಾರಯುತ ಶಿಕ್ಷಣ ನೀಡುವ ಮಾತೆಯಾಗಿದ್ದು, ಸರ್ವರನ್ನು ಉದ್ಧಾರ ಮಾಡುವ ಮೂಲಕ ಸಮಾಜದ ಆದರ್ಶ ವ್ಯಕ್ತಿಯಾಗುವಂತೆ ಅನುಗ್ರಹಿಸುತ್ತಾಳೆ ಎಂದು ತಿಳಿಸಿದರು.
ಸಂಸ್ಥೆಯ ಟ್ರಸ್ಟ್ ನ ಸುಧೀರ್ ನಾಯಕ್, ವಸತಿ ನಿಲಯದ ಸದಸ್ಯ ರಾಮಕೃಷ್ಣ ಆಚಾರ್ಯ, ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಯ ಮೇಲ್ವಿಚಾರಕ ರಾಘವೇಂದ್ರ , ವಸತಿ ನಿಲಯದ ಮುಖ್ಯಸ್ಥ ನಿತಿನ್ ಶೆಟ್ಟಿ , ವಸತಿ ನಿಲಯದ ಮೇಲ್ವಿಚಾರಕರಾದ ಭರತ್, ಶಿವಕುಮಾರ್ , ತಿಮ್ಮಪ್ಪ, ಅಭಿಜಿತ್, ಶ್ರವಣ್, ವಿರೂಪಾಕ್ಷ, ಜಂಬಯ್ಯ, ರಮ್ಯಾ, ಅಂಜಲಿ, ಪೃಥ್ವಿ, ಹಾಗೂ ವಸತಿ ನಿಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.