ಹೆಬ್ರಿ: ಹೆಬ್ರಿ ತಾಲೂಕಿನ ಬಚ್ಚಪ್ಪು ಗ್ರಾಮದ ನೆಕ್ಕರ್ಕೆ ಎಂಬಲ್ಲಿ ಜಾರ್ಖಂಡ್ ಮೂಲದ ಗರ್ಭಿಣಿ ಮಹಿಳೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹೆಬ್ರಿ ಗ್ರಾಮ ಬಚ್ಚಪ್ಪು ನೆಕ್ಕರ್ಕೆಯಲ್ಲಿರುವ ಆ್ಯಂಟೋನಿ ಎಂಬರವರ ತೋಟದ ಮನೆಯಲ್ಲಿನ ಪಕ್ಕದ ರೂಮಿನಲ್ಲಿ ಸುಮಾರು 1 ವರ್ಷದ ಹಿಂದೆ ಮದುವೆಯಾಗಿದ್ದ ಮಹಿಳೆ ಪ್ರಿಯಾಂಕ ಒರಾನ್(24) ತನ್ನ ಗಂಡ ಬಿಪಿನ್‌ಒರಾನ್‌ನೊಂದಿಗೆ ಕಳೆದ 2 ತಿಂಗಳಿನಿಂದ ವಾಸವಿದ್ದರು. ಜಾಖಂಡ್‌ನಿಂದ ಇಲ್ಲಿಗೆ ಕೆಲಸಕ್ಕೆಂದು ಬಂದಿದ್ದ ಅವರು ಮೊದಲು ಇಲ್ಲಿರಲು ಆಕ್ಷೇಪ ವ್ಯಕ್ತಪಡಿಸುತ್ತಿದ್ದು ನಂತರ ಹೊಂದಿಕೊAಡು ಪತಿಯೊಂದಿಗೆ ಇಲ್ಲಿಯೇ ವಾಸವಿದ್ದು, ಗರ್ಭಿಣಿಯೂ ಆಗಿದ್ದರು.
ಕಳೆದ ಒಂದು ವಾರದಿಂದ ಖಿನ್ನತೆಗೆ ಒಳಗಾಗಿ ಮಂಕಾಗಿದ್ದ ಪ್ರಿಯಾಂಕ ಸೆ.2 ರ ರಾತ್ರಿ ತಮ್ಮ ಮನೆಯ ಸಮೀಪದ ಶೆಡ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.