ಹೆಬ್ರಿ: ಶಿವಮೊಗ್ಗ ಕಡೆಯಿಂದ ಮಂಗಳೂರಿಗೆ ಹೋಗುತ್ತಿದ್ದ ಆ್ಯಂಬುಲೆನ್ಸ್ ವಾಹನ ಹಾಗೂ ಬೊಲೆರೋ ಪಿಕಪ್ ವಾಹನ ಮುಖಾಮುಖಿ ಡಿಕ್ಕಿಯಾಗಿ ಆ್ಯಂಬುಲೆನ್ಸ್ ಹಾಗೂ ಬೊಲೆರೋ ವಾಹನದಲ್ಲಿದ್ದವರಿಗೆ ಗಾಯಗಳಾಗಿವೆ.
ಆ್ಯಂಬುಲೆನ್ಸ್ ಚಾಲಕ ಅಲ್ಲಾಭಕ್ಷ್ ಎಂಬವರು ಶನಿವಾರ ಮುಂಜಾನೆ1.40 ರವೇಳೆಗೆ ಶಿವಮೊಗ್ಗದಿಂದ ಮಂಗಳೂರಿನ ಯೆನಪೋಯ ಆಸ್ಪತ್ರೆಗೆ ಅಯಾನ್ ಖಾನ್ ಸೂರಿ, ರಝಿಯಾ ಖಾನ್, ಮೊಹಮ್ಮದ್ ಆರೀಫ್ ಹಾಗೂ ಐಝಾನ್ ಖಾನ್ ಎಂಬವರನ್ನು ಕರೆದೊಯ್ಯುವಾಗ ಸೀತಾನದಿ ಎಂಬಲ್ಲಿ ಹೆಬ್ರಿಕಡೆಯಿಂದ ಶಿವಮೊಗ್ಗ ಕಡೆಗೆ ಹೋಗುತ್ತಿದ್ದ ಬೊಲೆರೊ ವಾಹನ ಡಿಕ್ಕಿಯಾಗಿದೆ.
ಈ ಅಪಘಾತದಿಂದ ಆ್ಯಂಬುಲೆನ್ಸ್ ಹಾಗೂ ಬೊಲೆರೋ ವಾಹನದಲ್ಲಿದ್ದ ಪ್ರಯಾಣಿಸುತ್ತಿದ್ದವರು ಗಾಯಗೊಂಡಿದ್ದಾರೆ.
ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ