ಹೆಬ್ರಿ: ಹೆಬ್ರಿ ತಾಲೂಕಿನ ಬೆಳಂಜೆಯಲ್ಲಿ ಮದುವೆ ಮನೆಯಲ್ಲಿ ಪರವಾನಗಿ ಪಡೆಯದೆ ತಡರಾತ್ರಿವರೆಗೆ ಡಿಜೆ ಅಳವಡಿಸಿ ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟು ಮಾಡಿದ್ದಾರೆ ಎನ್ನುವ ಆರೋಪದಲ್ಲಿ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಂಜೆ ಗ್ರಾಮದ ಈಶ್ವರ ನಗರ ಕೃಷ್ಣ ಮೂರ್ತಿ ಎಂಬವರ ಮನೆಯಲ್ಲಿ ಮಾ.15 ರಂದು ಅವರ ಮಗಳ ಮೆಹಂದಿ ಕಾರ್ಯಕ್ರಮಕ್ಕೆ ಯಾವುದೇ ಪರವಾನಗಿ ಪಡೆಯದೆ ತಡರಾತ್ರಿವರೆಗೆ ಕರ್ಕಶವಾದ ಡಿಜೆ ಹಾಕಲಾಗಿತ್ತು. ಇದರಿಂದ ಸಾರ್ವಜನಿಕರಿಗೆ ತೊಂದರೆ ಆದ ಹಿನ್ನಲೆಯಲ್ಲಿ ದೂರು ದಾಖಲಾಗಿದೆ.
K