ಹೆಬ್ರಿ : ಸೇವಾ ಸಂಗಮ ಅಮೃತ ಭಾರತಿ ಶಿಶುಮಂದಿರ, ಹೆಬ್ರಿ ಇದರ ಪ್ರಾರಂಭೋತ್ಸವವು ವಿವಿಧ ಪ್ರಾಣಿವೇಷಧಾರಿ ಮಕ್ಕಳ ನೃತ್ಯ ಮೆರವಣಿಗೆ, ಭಾರತ ಮಾತೆ ಮತ್ತು ಸರಸ್ವತಿ ಮಾತೆಗೆ ಆರತಿ ಬೆಳಗುವುದರೊಂದಿಗೆ ಅರ್ಥಪೂರ್ಣವಾಗಿ ನೆರವೇರಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪಿ ಆರ್ ಎನ್ ಅಮೃತ ಭಾರತಿ ಟ್ರಸ್ಟ್ ನ ಸದಸ್ಯರಾದ ಬಾಲಕೃಷ್ಣ ಮಲ್ಯ ಮಾತನಾಡಿ, ಅಮೃತ ಭಾರತಿ ಶಿಶು ಮಂದಿರವು ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ನೀಡಿ ಅವರನ್ನು ಶ್ರೇಷ್ಠ ನಾಗರಿಕರನ್ನಾಗಿ ರೂಪಿಸುತ್ತಾ ಬಂದಿದೆ. ಇದರ ಜೊತೆಗೆ ಪೋಷಕರು ಮಕ್ಕಳಿಗೆ ಮಾದರಿಯಾಗುವ ನಡತೆಯನ್ನು ಹೊಂದಿರಬೇಕು ಎಂದು ತಿಳಿಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಸೇವಾ ಸಂಗಮ ಅಮೃತ ಭಾರತಿ ಶಿಶು ಮಂದಿರದ ಕಾರ್ಯದರ್ಶಿ ಗುರುದಾಸ್ ಶೆಣೈ ಮಾತನಾಡಿ, ಶಿಶುಮಂದಿರದಲ್ಲಿ ಬುನಾದಿ ಶಿಕ್ಷಣ ತರಬೇತಿ ಹೊಂದಿದ ನುರಿತ ಮಾತಾಜಿಯವರಿದ್ದು 12 ಶೈಕ್ಷಣಿಕ ವ್ಯವಸ್ಥೆಗಳೊಂದಿಗೆ ಅನುಭವ ಆಧಾರಿತ ಮತ್ತು ಕ್ರಿಯಾ ಆಧಾರಿತ ಶಿಕ್ಷಣವನ್ನು ನೀಡಿ ವಿದ್ಯಾರ್ಥಿಗಳ ಸಮಗ್ರ ವಿಕಾಸಕ್ಕೆ ಭದ್ರಬುನಾದಿಯನ್ನು ಹಾಕುವುದು ಅಮೃತ ಭಾರತಿ ಶಿಶು ಮಂದಿರದ ಧ್ಯೇಯವಾಗಿದೆ ಎಂದರು.
ಪುಟ್ಟ ಮಕ್ಕಳಿಗೆ ಹಲವು ಉಡುಗೊರೆಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಅಮೃತಭಾರತಿ ಟ್ರಸ್ಟ್ ನ ವಿಶ್ವಸ್ಥರಾದ ಶೈಲೇಶ್ ಕಿಣಿ, ಲಕ್ಷ್ಮಣ ಭಟ್ , ವಿಷ್ಣುಮೂರ್ತಿ ನಾಯಕ್ , ಪಿ ಆರ್ ಎನ್ ಅಮೃತ ಭಾರತಿ ಪದವಿಪೂರ್ವ ಕಾಲೇಜಿನ ಅಧ್ಯಕ್ಷರಾದ ರಾಜೇಶ್ ನಾಯಕ್, ಸೇವಾ ಸಂಗಮ ಅಮೃತ ಭಾರತಿ ಶಿಶು ಮಂದಿರ ಆಡಳಿತ ಮಂಡಳಿಯ ಸದಸ್ಯರಾದ ಆಶಾ ನಾಯಕ್, ಲಕ್ಷ್ಮೀ ನಾಯಕ್ ಮುಖ್ಯಸ್ಥರುಗಳಾದ ಶಕುಂತಳಾ ನಾಯಕ್, ಅಪರ್ಣಾ ಆಚಾರ್ ,ಅರುಣ್ ಕುಮಾರ್ , ಅನಿತಾ ಮತ್ತು ಶಿಶುಮಂದಿರದ ಪೋಷಕ ವೃಂದ ,ಬೋಧಕ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರತಿಮಾ ಮಾತಾಜಿ ನಿರೂಪಿಸಿದರು. ಅನಿತಾ ಮಾತಾಜಿ ಸ್ವಾಗತಿಸಿ, ಮಲ್ಲಿಕಾ ಮಾತಾಜಿ ವಂದಿಸಿದರು