ಹೆಬ್ರಿ: ಮನೆಯಲ್ಲಿ ಅಡುಗೆ ಮಾಡುತ್ತಿದ್ದ ವೇಳೆ ಗ್ಯಾಸ್ ಲೀಕೆಜ್‌ನಿಂದ ಉಂಟಾದ ಅಗ್ನಿ ಅವಘಡದಿಂದ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಹೆಬ್ರಿ ನಿವಾಸಿ ಅನೂಪ (35ವರ್ಷ) ಎಂಬವರು ಮನೆಮನೆಗೆ ಗ್ಯಾಸ್ ವಿತರಣೆ ಕೆಲಸ ಮಾಡಿಕೊಂಡಿದ್ದು, ಏ.11 ರಂದು ಕೆರೆಬೆಟ್ಟು ಮಂಡಾಡಿಜೆಡ್ಡು ನಲ್ಲಿರುವ ತಮ್ಮ ಮನೆಯಲ್ಲಿ ಅಡುಗೆ ಮಾಡಲು ಹೋಗಿ ಸ್ಟೌ ಹಚ್ಚಿದಾಗ ಒತ್ತಡದಿಂದ ಅಥವಾ ಲೀಕೆಜ್ ನಿಂದ ಒಮ್ಮಲೇ ಬೆಂಕಿ ಬಂದು ಅನೂಪ ಗಂಭೀರವಾಗಿ ಗಾಯಗೊಂಡಿದ್ದರು. ಅವರಿಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಎ.17 ರಂದು ಮೃತಪಟ್ಟಿದ್ದಾರೆ.
ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.