ಕಾರ್ಕಳ/ಉಡುಪಿ : ರಾಷ್ಟçಮಟ್ಟದಲ್ಲಿ ಇಂಜಿನಿಯರಿAಗ್ ಪ್ರವೇಶಕ್ಕಾಗಿ ಎನ್.ಟಿ.ಎ ನಡೆಸುವ ಜೆ.ಇ.ಇ ಮೈನ್ ಪರೀಕ್ಷೆಯ 2ನೇ ಫೇಸ್‌ನ ಅಂತಿಮ ಫಲಿತಾಂಶದಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ 9 ವಿದ್ಯಾರ್ಥಿಗಳು 99ಕ್ಕೂ ಅಧಿಕ ಪರ್ಸಂಟೈಲ್ ಪಡೆದಿದ್ದು, ಇಬ್ಬರು ವಿದ್ಯಾರ್ಥಿಗಳು ಭೌತಶಾಸ್ತçದಲ್ಲಿ 100 ಪರ್ಸಂಟೈಲ್ ಗಳಿಸಿದ್ದಾರೆ.
ವಿದ್ಯಾರ್ಥಿಗಳಾದ ಆಕಾಶ್ ಎಚ್. ಪ್ರಭು 99.9194206 ಪರ್ಸಂಟೈಲ್, ಧನುಶ್ ನಾಯಕ್ 99.7330507 ಪÀರ್ಸಂಟೈಲ್, ತರುಣ್ ಎ. ಸುರಾನ 99.7329879 ಪರ್ಸಂಟೈಲ್, ಕೆ. ಮನೋಜ್ ಕಾಮತ್ 99.6811864 ಪರ್ಸಂಟೈಲ್, ಚಿಂತನ್ ಜೆ.ಮೆಘಾವತ್ 99.6686123 ಪರ್ಸಂಟೈಲ್, ಹೃತ್ವಿಕ್ ಶೆಟ್ಟಿ 99.6582215 ಪರ್ಸಂಟೈಲ್, ವೇದಾಂತ್ ಶೆಟ್ಟಿ 99.2929708 ಪರ್ಸಂಟೈಲ್, ಸತೀಶ್ ಎಸ್.ಕರಗನ್ನಿ 99.1444377 ಪರ್ಸಂಟೈಲ್ ಹಾಗೂ ಅಪೂರ್ವ್ ವಿ. ಕುಮಾರ್ 99.0512045 ಪರ್ಸಂಟೈಲ್ ಪಡೆದಿದ್ದಾರೆ.
ವಿಷಯವಾರು ಅತ್ಯಧಿಕ ಪರ್ಸಂಟೈಲ್ ಗಳಿಸಿದ ಸಂಸ್ಥೆಯ ವಿದ್ಯಾರ್ಥಿಗಳಲ್ಲಿ, ಭೌತಶಾಸ್ತçದಲ್ಲಿ 100 ಪರ್ಸಂಟೈಲ್‌ನೊAದಿಗೆ ಸರ್ವಜಿತ್ ಕೆ.ಆರ್ ಮತ್ತು ಸಿದ್ಧಾರ್ಥ್ ಎ, ರಸಾಯನಶಾಸ್ತçದಲ್ಲಿ ಅಮರ್ಥ್ಯ ಭಟ್ 99.9714342 ಪರ್ಸಂಟೈಲ್ ಹಾಗೂ ಗಣಿತಶಾಸ್ತçದಲ್ಲಿ ಕೆ.ಮನೋಜ್‌ಕಾಮತ್ 99.9331666 ಪರ್ಸಂಟೈಲ್ ಪಡೆದಿದ್ದಾರೆ.
ವಿಷಯವಾರು ವಿಭಾಗದಲ್ಲಿ ಸಂಸ್ಥೆಯು, ಭೌತಶಾಸ್ತçದಲ್ಲಿ 34 ಮಂದಿ, ರಸಾಯನಶಾಸ್ತçದಲ್ಲಿ 35 ಮಂದಿ ಹಾಗೂ ಗಣಿತಶಾಸ್ತçದಲ್ಲಿ 7 ಮಂದಿ ವಿದ್ಯಾರ್ಥಿಗಳು 99ಕ್ಕಿಂತ ಅಧಿಕ ಪರ್ಸಂಟೈಲ್ ದಾಖಲಸಿಕೊಂಡಿದ್ದಾರೆ. ಜ್ಞಾನಸುಧಾ 99 ಪರ್ಸಂಟೈಲ್‌ಗಿAತ ಅಧಿಕ 9 ವಿದ್ಯಾರ್ಥಿಗಳು, 98 ಪರ್ಸಂಟೈಲ್‌ಗಿAತ ಅಧಿಕ 30 ವಿದ್ಯಾರ್ಥಿಗಳು, 97 ಪರ್ಸಂಟೈಲ್‌ಗಿAತ ಅಧಿಕ 60 ವಿದ್ಯಾರ್ಥಿಗಳು 96 ಪರ್ಸಂಟೈಲ್‌ಗಿAತ ಅಧಿಕ 88 ವಿದ್ಯಾರ್ಥಿಗಳು 95 ಪರ್ಸಂಟೈಲ್‌ಗಿAತ ಅಧಿಕ 117 ವಿದ್ಯಾರ್ಥಿಗಳು 90 ಪರ್ಸಂಟೈಲ್‌ಗಿAತ ಅಧಿಕ 217 ವಿದ್ಯಾರ್ಥಿಗಳು ಉತ್ತಮ ಪರ್ಸಂಟೈಲ್ ಗಳಿಸಿದ್ದಾರೆ.
ಈ ಎಲ್ಲಾ ಸಾಧಕ ವಿದ್ಯಾರ್ಥಿಗಳನ್ನು ಹಾಗೂ ಸಾಧನೆಗೆ ಬೆನ್ನೆಲುಬಾದ ಜ್ಞಾನಸುಧಾ ಎಂಟ್ರನ್ಸ್ ಅಕಾಡೆಮಿಯಾಪರಿಶ್ರಮವನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷರು, ಆಡಳಿತ ಮಂಡಳಿ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಅಭಿನಂದಿಸಿ ಹರ್ಷವ್ಯಕ್ತಪಡಿಸಿದೆ.