
ಬಾಗಲಕೋಟೆ,ಮೇ.04: ಕರ್ನಾಟಕದ ಎರಡು ವಿಧಾನಸಭಾ ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಬಾಗಲಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಅವರು ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ. ಒಟ್ಟು 20 ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ 14875 ಮತಗಳ ಅಂತರದಿAದ ಜಯಗಳಿಸಿದರು. ವೀರಣ್ಣ ಚರಂತಿಮಠ ಅವರು ಈ ಒಂದು ಕ್ಷೇತ್ರದಲ್ಲಿ ಇದೀಗ ಸೋಲು ಅನುಭವಿಸಿದ್ದಾರೆ. ತೀವ್ರ ಹಣಾಹಣಿಯಲ್ಲಿ ಉಮೇಶ್ ಮೇಟಿಗೆ 78,482 ಮತ ಬಂದಿದ್ದು, ಮತ್ತು ವೀರಣ್ಣ ಚರಂತಿಮಠ ಅವರಿಗೆ 63607 ಮತಗಳು ಬಿದ್ದಿವೆ. ಇನ್ನು ಮೂರು ಸುತ್ತಿನ ಮತ ಎಣಿಕೆ ಮಾತ್ರೆಗಳು ಬಾಕಿ ಇದ್ದು, ಕಾಂಗ್ರೆಸ್ ಗೆಲುವು ನಿಶ್ಚಿತವಾಗಿದೆ.
ಮತಗಳ ಅಂತರ ಮತ್ತು ಅಂಕಿ-ಅAಶ: ಒಟ್ಟು 20 ಸುತ್ತುಗಳ ಸುದೀರ್ಘ ಮತ ಎಣಿಕೆಯ ನಂತರ, ಉಮೇಶ್ ಮೇಟಿ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ವೀರಣ್ಣ ಚರಂತಿಮಠ ಅವರಿಗಿಂತ 14,875 ಮತಗಳ ಬೃಹತ್ ಅಂತರದಿAದ ಗೆಲುವು ಸಾಧಿಸಿದರು. ಚುನಾವಣಾ ಕಣದಲ್ಲಿ ಉಮೇಶ್ ಮೇಟಿ ಅವರು ಒಟ್ಟು 78,482 ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾದರೆ, ಬಿಜೆಪಿಯ ವೀರಣ್ಣ ಚರಂತಿಮಠ ಅವರು 63,607 ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟರು.
ಆರಂಭಿಕ ಸುತ್ತಿನಿಂದಲೇ ಉಮೇಶ್ ಮೇಟಿ ಅವರು ಮುನ್ನಡೆ ಕಾಯ್ದುಕೊಳ್ಳುತ್ತಾ ಬಂದಿದ್ದರು. ಪ್ರತಿ ಸುತ್ತಿನಲ್ಲೂ ಮತಗಳ ಅಂತರ ಹೆಚ್ಚುತ್ತಾ ಹೋದಂತೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿತ್ತು. ಪ್ರಬಲ ಪೈಪೋಟಿ ನೀಡುವ ನಿರೀಕ್ಷೆಯಲ್ಲಿದ್ದ ವೀರಣ್ಣ ಚರಂತಿಮಠ ಅವರಿಗೆ ಈ ಸೋಲು ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ. ಕ್ಷೇತ್ರದ ಮತದಾರರು ಈ ಬಾರಿ ಬದಲಾವಣೆ ಬಯಸಿರುವುದು ಫಲಿತಾಂಶದಲ್ಲಿ ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ಉಮೇಶ್ ಮೇಟಿ ಅವರ ಗೆಲುವು ಅಧಿಕೃತವಾಗುತ್ತಿದ್ದಂತೆ ಬಾಗಲಕೋಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ಮುಳುಗಿದ್ದಾರೆ. ಪಟಾಕಿ ಸಿಡಿಸಿ, ಗುಲಾಲ್ ಎರಚಿ ವಿಜಯೋತ್ಸವ ಆಚರಿಸಲಾಗುತ್ತಿದೆ. ಈ ಗೆಲುವು ಕೇವಲ ಅಭ್ಯರ್ಥಿಯದ್ದಲ್ಲ, ಬದಲಾಗಿ ಕ್ಷೇತ್ರದ ಜನರ ಅಭಿವೃದ್ಧಿಯ ಆಶಯಕ್ಕೆ ಸಿಕ್ಕ ಜಯ ಎಂದು ಮುಖಂಡರು ಬಣ್ಣಿಸಿದ್ದಾರೆ.



.
.
.
.
.
.
.
.
.
.
.
.
.
.
.
.
.
.
.
.
