

ಕಾರ್ಕಳ,ಆ.14: ಜನಸಂಖ್ಯೆ ಹಾಗೂ ನಗರಗಳು ವಿಸ್ತಾರವಾದಂತೆ ಹೊಸಹೊಸ ಉದ್ಯಮಗಳು ಬೆಳೆಯುವುದರಿಂದ ಆರ್ಥಿಕತೆಗೆ ಬಲ ಸಿಗುತ್ತದೆ ಎಂದು ರಾಜಾಪುರ ಸಾರಸ್ವತ ಕ್ರೆಡಿಟ್ ಕೋಅಪರೇಟಿವ್ ಸೊಸೈಟಿಯ ಅಧ್ಯಕ್ಷ ಸಹಕಾರಿ ಧುರೀಣ ಕಡಾರಿ ರವೀಂದ್ರ ಪ್ರಭು ಹೇಳಿದರು.
ಅವರು ಕಾರ್ಕಳದ ಜೋಡುರಸ್ತೆಯ ಸಹಕಾರ ಸಿಂಧೂರ ಕಟ್ಟಡದಲ್ಲಿ ನೂತನವಾಗಿ ಆರಂಭಗೊಂಡಿರುವ NP ಫರ್ನಿಚರ್ಸ್ & ಇಲೆಕ್ಟ್ರಾನಿಕ್ಸ್ ಮಳಿಗೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜೋಡುರಸ್ತೆಯು ಕಾರ್ಕಳದ ಹೆಬ್ಬಾಗಿಲಿನಂತಿರುವ ಪೇಟೆಯಾಗಿದೆ. ಸಾಕಷ್ಟು ಉದ್ಯಮಗಳು ಆರಂಭ ಗೊಡಿದ್ದು ಇದೀಗ ನಮ್ಮದೇ ಕಟ್ಟಡದಲ್ಲಿ ಸುಸಜ್ಜಿತ NP ಇಲೆಕ್ಟ್ರಾನಿಕ್ಸ್ ಇದೀಗ ಪೂರ್ಣ ಪ್ರಮಾಣದಲ್ಲಿ ಕಾರ್ಯರೂಪಕ್ಕೆ ಬಂದಿದ್ದು, ಇದರ ಜೊತೆಗೆ ವಿಶಾಲ್ ಮಾರ್ಟ್ ಹಾಗೂ ಭಾರತ್ ಸಿನೆಮಾಸ್ ಸೇರಿದಂತೆ ವಿವಿಧ ವಾಣಿಜ್ಯ ಚಟುವಟಿಕೆಗಳಿಂದ ಜೋಡುರಸ್ತೆ ಪ್ರಮುಖ ವ್ಯಾಪಾರ ಕೇಂದ್ರವಾಗಿ ಬೆಳೆಯುತ್ತಿದೆ. ನೂತನ ಸಂಸ್ಥೆಯು ಉತ್ತರೋತ್ತರ ಯಶಸ್ಸು ಸಾಧಿಸಲಿ ಎಂದರು ಶುಭ ಹಾರೈಸಿದರು.
ಲಕ್ಷ್ಮೀ ವಾದಿರಾಜ ನೆಕ್ಕರಪಲ್ಕೆ ಮಾತನಾಡಿ, NP ಇಲೆಕ್ಟ್ರಾನಿಕ್ಸ್ & ಫರ್ನಿಚರ್ಸ್ ಮಳಿಗೆ ಉತ್ತಮವಾಗಿ ರೂಪುಗೊಂಡಿದ್ದು, ಗ್ರಾಹಕರ ಆಶೀರ್ವಾದ ಹಾಗೂ ಪ್ರೋತ್ಸಾಹ ದೊರೆಯಲಿ ಎಂದು ಹಾರೈಸಿದರು.
ಕ್ರಿಯೇಟಿವ್ ಕಾಲೇಜಿನ ಸಹಸಂಸ್ಥಾಪಕ ಅಶ್ವಥ್ ಎಸ್.ಎಲ್. ಅವರು ಎನ್‌ಪಿ ಫರ್ನಿಚರ್ಸ್ನ ವೆಬ್‌ಸೈಟ್ ಅನಾವರಣಗೊಳಿಸಿ ಮಾತನಾಡಿ, ಆಧುನಿಕ ಜೋಡುರಸ್ತೆಯ ಬೆಳವಣಿಗೆಗೆ ಇಂತಹ ಉದ್ಯಮಗಳು ಸಹಕಾರಿಯಾಗಿವೆ. ಸಹಕಾರ ಸಿಂಧೂರ ಕಟ್ಟಡ ಕಾರ್ಕಳದ ಆಧುನಿಕತೆಗೆ ತಿಲಕವಿಟ್ಟಂತಿದ್ದು, ನಗರದ ಜನರನ್ನು ಮತ್ತಷ್ಟು ಹತ್ತಿರಕ್ಕೆ ಕರೆತರುವ ವಾಣಿಜ್ಯ ಕೇಂದ್ರವಾಗಿ ರೂಪುಗೊಂಡಿದೆ. ಜನರೊಂದಿಗೆ ಒಡನಾಟ ಹೊಂದಿರುವ ಎನ್‌ಪಿ ಗ್ರೂಪ್ ವಿವಿಧ ಕ್ಷೇತ್ರಗಳಲ್ಲಿ ದಾಪುಗಾಲು ಇಡುತ್ತಿದೆ ಎಂದರು.
ಬೈಲೂರು ವಿಕ್ರಂ ಹೆಗ್ಡೆ ಮಾತನಾಡಿ, ಶ್ರಾವಣ ಶುಕ್ರವಾರದ ಶುಭ ಸಂದರ್ಭದಲ್ಲಿ ಜೋಡುರಸ್ತೆ ವಾಣಿಜ್ಯ ಹಾಗೂ ಉದ್ಯಮದ ಕೇಂದ್ರವಾಗಿ ರೂಪುಗೊಳ್ಳುತ್ತಿರುವುದು ಸಂತಸದ ಸಂಗತಿ. ಕಾರ್ಕಳ ಆಧುನಿಕತೆಯತ್ತ ಹೆಜ್ಜೆ ಹಾಕುತ್ತಿದ್ದು, ಸಹಕಾರ ಸಿಂಧೂರ ಕಟ್ಟಡ ಇದಕ್ಕೆ ಸಾಕ್ಷಿಯಾಗಿದೆ ಎಂದರು.
ಮೂಡುಬಿದಿರೆಯ ಉದ್ಯಮಿ ಶ್ರೀಪತಿ ಭಟ್ ಮಾತನಾಡಿ, ಆಧುನಿಕ ಜಗತ್ತು ನಿರಂತರ ಬದಲಾವಣೆಯತ್ತ ಸಾಗುತ್ತಿದೆ. ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಸಾಗಿದಾಗ ಮಾತ್ರ ಬದುಕನ್ನು ಉತ್ತಮವಾಗಿ ಕಟ್ಟಿಕೊಳ್ಳಲು ಸಾಧ್ಯ. ಐತಿಹಾಸಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆಯ ಕಾರ್ಕಳವು ಜಾತಿ, ಮತ ಭೇದವಿಲ್ಲದೆ ಸೌಹಾರ್ದತೆಯನ್ನು ಸಾರಿದ ನಗರವಾಗಿದೆ ಎಂದರು.
ಉದಯಕುಮಾರ್ ಶೆಟ್ಟಿ ಮಾತನಾಡಿ, ಉದ್ಯಮಗಳು ಸಮಾಜಮುಖಿಯಾಗಿ ಬೆಳೆಯಬೇಕು. ಉದ್ಯಮಗಳು ಬೆಳೆಯುವುದರೊಂದಿಗೆ ಸಮಾಜವೂ ಬೆಳೆಯುತ್ತದೆ. ಜನರು ಮಾನವೀಯ ಸಂಬAಧಗಳನ್ನು ಮೈಗೂಡಿಸಿ ಪರಸ್ಪರ ಸಹಕಾರ ಹಾಗೂ ಸಹಬಾಳ್ವೆಯಿಂದ ಬದುಕುವಂತಾಗಬೇಕು ಎಂದರು.
ಉದ್ಯಮಿ ರವೀಂದ್ರ ಶೆಟ್ಟಿ ಬಜಗೋಳಿ ಮಾತನಾಡಿ, NP ಗ್ರೂಪ್‌ನ ಈ ಹೊಸ ಹೆಜ್ಜೆ ಹೆಮ್ಮೆ ಮೂಡಿಸಿದೆ. ಆಧುನಿಕ ಉಪಕರಣಗಳು ಹಾಗೂ ವಿವಿಧ ಸೌಲಭ್ಯಗಳೊಂದಿಗೆ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಸಿಬ್ಬಂದಿಯ ಪಾತ್ರ ಮಹತ್ವದ್ದಾಗಿದೆ. ಈ ಪರಿಸರದಲ್ಲಿ ಉದ್ಯಮಗಳ ಬೆಳವಣಿಗೆಗೆ ಎಲ್ಲರ ಸಹಕಾರ ಅಗತ್ಯ ಎಂದರು.
ಉದ್ಯಮಿ ಪ್ರಮಾಲ್ ಕುಮಾರ್ ಮಾತನಾಡಿ, ಕಾರ್ಕಳವನ್ನು ಹೈಟೆಕ್ ಸಿಟಿಯಾಗಿ ಬೆಳೆಸುವಲ್ಲಿ NP ಗ್ರೂಪ್‌ನ ಕೊಡುಗೆ ಮಹತ್ವದ್ದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಚಂದ್ರಕಾAತ್ ಶೆಟ್ಟಿ, ಸುಮಿತ್ ಶೆಟ್ಟಿ ಕೌಡೂರು, ನೀರೆ ರವೀಂದ್ರ ನಾಯಕ್, ಸಂತೋಷ್ ರಾವ್, ಜಾನ್ ಡಿ’ಸಿಲ್ವಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರವೀಂದ್ರ ಪ್ರಭು ಕಡಾರಿ ಸೇರಿದಂತೆ ಅನೇಕ ಸಾಧಕರನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ಮುಖ್ಯಸ್ಥ ವಾಸುದೇವ ಭಟ್ ನೆಕ್ಕರಪಲ್ಕೆ ಮಾತನಾಡಿ, ಉದ್ಯಮದ ಯಶಸ್ಸಿನಲ್ಲಿ ಸಿಬ್ಬಂದಿಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಸಿಬ್ಬಂದಿಯೇ ಉದ್ಯಮದ ಜೀವಾಳವಾಗಿದ್ದು, ಅವರ ಸಹಕಾರ ಹಾಗೂ ಪರಿಶ್ರಮವೇ ನನಗೆ ನಿರಂತರ ಪ್ರೇರಣೆಯಾಗಿದೆ ಎಂದರು.
ರಮೇಶ್ ಕಲ್ಲೊಟ್ಟೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಮುಖ್ಯಸ್ಥ ವಾಸುದೇವ ಭಟ್ ಅವರು ವಂದಿಸಿದರು.







.
.
.
.
.
.
.
.
.
.
.
.
.
.
.
.
.
.
.
.
