
ಕಾರ್ಕಳ,ಏ.27: ತಾಲೂಕಿನ ಕಡ್ತಲ ಗ್ರಾಮದ ಸಿರಿಬೈಲು ಶ್ರೀ ಭರ್ಭರೇಶ್ವರ ದುರ್ಗಾ ಪರಮೇಶ್ವರಿ ದೇವಸ್ಥಾನದ ಹುಂಡಿಯ ಹಣ ಕಳವುಗೈದಿರುವ ಪ್ರಕರಣ ಭಾನುವಾರ ನಡೆದಿದೆ.
ದೇವಸ್ಥಾನದ ಒಳಗೆ ಆವರಣದಲ್ಲಿರುವ ಭರ್ಭರೇಶ್ವರ, ಕೊಡಮಣಿತ್ತಾಯ, ನಾಗದೇವರ ಕಾಣಿಕೆ ಹುಂಡಿಯ ಬೀಗವನ್ನು ಮುರಿದು ಹುಂಡಿಯಲ್ಲಿದ್ದ 1,000 ರೂ. ಕಾಣಿಕೆ ಹಣವನ್ನು ಕಳವುಗೈದಿದ್ದಾನೆ. ಅದೇ ವೇಳೆ ದೇವಸ್ಥಾನದಲ್ಲಿ ಉಳಿದುಕೊಳ್ಳುವ ಉಮೇಶ್ ಹೆಗ್ಡೆ ಮತ್ತು ಜನಾರ್ಧನ ಆಚಾರ್ಯ ಎಂಬವರು ಶಬ್ದ ಕೇಳಿ ಸ್ಥಳಕ್ಕೆ ಬಂದಾಗ ವ್ಯಕ್ತಿ ಓಡಿ ಹೋಗಿ ಬೈಕಿನಲ್ಲಿ ಪರಾರಿಯಾಗಿದ್ದಾನೆ.
ಈ ಕುರಿತು ಶರಣ್ ಹೆಗ್ಡೆ ನೀಡಿದ ದೂರಿನಂತೆ ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


.
.
.
.
.
.
.
.
.
.
.
.
.
.
.
.
.
.
.
.
