
ಕಾರ್ಕಳ, ಜು. 20: ಬಂಟ್ವಾಳದ ಬಿಸಿ ರೋಡ್ ಸರ್ಕಾರಿ ಬಸ್ ನಿಲ್ದಾಣದಲ್ಲಿ ಲಾವಣ್ಯ ಎನ್ನುವ ಯುವತಿಯನ್ನು ಕತ್ತಿಯಿಂದ ಕಡಿದು ಬರ್ಬರವಾಗಿ ಹತ್ಯೆಗೈದ ಪ್ರಕರಣದಲ್ಲಿ ವಾಟ್ಸಾಪ್ ಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ ಆರೋಪದಲ್ಲಿ ಕಾರ್ಕಳದ ಕನಕ ಬಾರ್ ಮಾಲೀಕ ಹರ್ಷ ಕೆ. ಶೆಟ್ಟಿ ಎಂಬಾತನ ವಿರುದ್ಧ ಕಾರ್ಕಳ ಹಾಗೂ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಲಾವಣ್ಯ ಹತ್ಯೆಗೈದ ಆರೋಪಿ ಚೇತನ್ ಎಂಬಾತ ಬಿಲ್ಲವ ಸಮಾಜಕ್ಕೆ ಸೇರಿದವನು ಎಂದು ಬಿಂಬಿಸಿ ಶ್ರೀರಾಮ ಸೇನೆ ಕಾರ್ಕಳ ಹಾಗೂ ಕಾರ್ಕಳ ಟೈಗರ್ಸ್ ಸೇರಿದಂತೆ ಹಲವಾರು ವಾಟ್ಸಾಪ್ ಗ್ರೂಪ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ವಿಡಿಯೋ ಹಾಗೂ ಪೋಸ್ಟರ್ ರಚಿಸಿ ಶೇರ್ ಮಾಡಿ ಮೂಲಕ ಹರ್ಷ ಶೆಟ್ಟಿ ಜಾತಿ ಹಾಗೂ ಸಮುದಾಯಗಳ ನಡುವೆ ದ್ವೇಷ ಹಾಗೂ ಸಂಘರ್ಷಕ್ಕೆ ಪ್ರಯತ್ನಿಸುತ್ತಿದ್ದಾನೆ ಎಂದು ಎರಡು ಪ್ರತ್ಯೇಕ ದೂರು ದಾಖಲಾಗಿದೆ.
ಈ ಕುರಿತು ಬಂಟ್ವಾಳ ನಗರ ಠಾಣೆಯಲ್ಲಿ ಯಶವಂತ್ ಎಂಬವರು ದೂರು ದಾಖಲಿಸಿದ್ದರೆ, ಶರತ್ ಬೈಲಡ್ಕ ಎಂಬವರು ಕಾರ್ಕಳ ನಗರ ಠಾಣೆಯಲ್ಲಿ ದೂರು ನೀಡಿದ್ದ ಹಿನ್ನೆಲೆಯಲ್ಲಿ ಎರಡು ಪ್ರತ್ಯೇಕ FIR ದಾಖಲಾಗಿದೆ.



.
.
.
.
.
.
.
.
.
.
.
.
.
.
.
.
.
.
.
.
