
ಕಾರ್ಕಳ,ಜು.27: ನೀಟ್ ಪ್ರಶ್ನೆ ಪತ್ರಿಕೆ ಬಯಲಾಗಿ ವಿದ್ಯಾರ್ಥಿಗಳಿಗೆ ತೊಂದರೆ ಆಗಿರುವ ಬಗ್ಗೆ ಬಿಜೆಪಿ ಪಕ್ಷಕ್ಕೂ ತೀವ್ರ ಆಘಾತ ಹಾಗೂ ದುಃಖವಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಾದ ತಕ್ಷಣ ಕೇಂದ್ರ ಸರಕಾರವು ತುರ್ತು ಕ್ರಮ ಕೈಗೊಂಡು ಪಕ್ರರಣದ ತನಿಖೆಯನ್ನು ಸಿಬಿಐಗೆ ವಹಿಸಿದ್ದು, ಈಗಾಗಲೇ 13 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಕೇವಲ 63 ದಿನಗಳಲ್ಲಿ ನೀಟ್ ಮರು ಪರೀಕ್ಷೆ ನಡೆಸಿ ಫಲಿತಾಂಶ ಪ್ರಕಟಿಸಿ ವಿದ್ಯಾರ್ಥಿಗಳಿಗೆ ಮುಂದಿನ ವ್ಯಾಸಂಗಕ್ಕೆ ಅನುವು ಮಾಡಿಕೊಟ್ಟಿದೆ. ಅಲ್ಲದೇ ನ್ಯಾಷನಲ್ ಟೆಸ್ಟಿಂಗ್ ಎಜೆನ್ಸಿ (ಎನ್.ಟಿ.ಎ) ಒಂದು ಸ್ವಯತ್ತತೆಯ ಸಂಸ್ಥೆಯಾಗಿದ್ದು, ಪರೀಕ್ಷೆ ನಡೆಸುವ ಮತ್ತು ಫಲಿತಾಂಶ ಪ್ರಕಟಿಸುವ ಸಂಪೂರ್ಣ ಅಧಿಕಾರ ಹೊಂದಿದಾಗ್ಯೂ ಕೇಂದ್ರ ಸರಕಾರ ತನ್ನ ಹೊಣೆಗಾರಿಕೆಯನ್ನು ತಪ್ಪಿಸಿಕೊಳ್ಳದೇ ತಕ್ಷಣ ಕಾರ್ಯಪ್ರವೃತವಾಗಿದೆ.
ಆದರೆ ಕಾರ್ಕಳ ಕಾಂಗ್ರೆಸ್ ರಾಜಕೀಯ ವಿಷಯಗಳ ಬಗ್ಗೆ ಪರಿಜ್ಞಾನ ಇಲ್ಲದೆ ಕೇವಲ ಪ್ರಚಾರದ ತೆವಲಿಗಾಗಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವನ್ನು ದೂಷಿಸುವ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ರಾಜ್ಯ ಕಾಂಗ್ರೆಸ್ ನಾಯಕರುಗಳು ಕಾರ್ಕಳ ಕಾಂಗ್ರೆಸ್‌ನ ಪದಾಧಿಕಾರಿಗಳಿಗೆ ರಾಜಕೀಯ ವಿಷಯಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಮಾಹಿತಿ ಕಾರ್ಯಾಗಾರ ನಡೆಸುವುದು ಉತ್ತಮ ಎಂದು ಕಾರ್ಕಳ ಬಿಜೆಪಿ ವಕ್ತಾರ ರವೀಂದ್ರ ಮೊಯಿಲಿ ಹೇಳಿದ್ದಾರೆ.
ಭಾರತೀಯ ವೈದ್ಯಕೀಯ ಮಂಡಳಿ 2010 ರಲ್ಲಿ ರಾಷ್ಟç ಮಟ್ಟದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶದ ಬಗ್ಗೆ ಒಂದೇ ರೀತಿಯ ಪರೀಕ್ಷೆ ನಡೆಸುವ ಪ್ರಸ್ತಾಪವನ್ನು ಮಂಡಿಸಿತು. ಸದ್ರಿ ಪ್ರಸ್ತಾಪವನ್ನು 2013 ರಲ್ಲಿ ಕೇಂದ್ರ ಅಂಗೀಕರಿಸಿ ನೀಟ್ ಪರೀಕ್ಷೆಯ ಮೊದಲ ಅವೃತ್ತಿಯು 05-05-2013 ರಲ್ಲಿ ನಿಗಧಿಯಾಗಿತ್ತು. ಆ ಸಂಧರ್ಭದಲ್ಲಿ ಕೇಂದ್ರದಲ್ಲಿ ಡಾ. ಮನಮೋಹನ್ ಸಿಂಗ್ ನೇತೃತ್ವದ ಎನ್.ಡಿ.ಎ ಸರಕಾರ ಅಧಿಕಾರದಲ್ಲಿತ್ತು. ತದನಂತರ ನಾನಾ ಕಾರಣಗಳಿಗಾಗಿ ಪ್ರಕರಣ ಸರ್ವೋಚ್ಚ ನ್ಯಾಯಾಲಯದಲ್ಲಿ ಇದ್ದ ಕಾರಣ ಹಾಗೂ ನ್ಯಾಯಾಲಯದ ಆದೇಶದಿಂದಾಗಿ ನೀಟ್ ಪರೀಕ್ಷೆಯನ್ನು ನಡೆಸಲಾಗಿಲ್ಲ. ಸದ್ರಿ ವಿಷಯದ ಬಗ್ಗೆ ಕೇಂದ್ರ ಸರಕಾರವು ನ್ಯಾಷನಲ್ ಟೆಸ್ಟಿಂಗ್ ಎಜೆನ್ಸಿ ಮೂಲಕ ಪರೀಕ್ಷೆ ನಡೆಸುವ ನಿರ್ಧಾರವನ್ನು ಮಾನ್ಯ ನ್ಯಾಯಾಲಯಕ್ಕೆ ತಿಳಿಸಿ ನ್ಯಾಯಾಲಯವು ಒಪ್ಪಿಕೊಂಡ ಕಾರಣ 2016 ಇಸವಿಯ ನಂತರ ನೀಟ್ ಪರೀಕ್ಷೆ ಪುನರಾರಂಭಗೊAಡಿತು.
ಕೇAದ್ರ ಸರಕಾರವು 2013 ರಲ್ಲಿ ನೀಟ್ ಪರೀಕ್ಷೆಯನ್ನು ಆರಂಭಿಸುವ ಪ್ರಸ್ತಾಪವನ್ನು ಡಾ. ಮನಮೋಹನ್ ಸಿಂಗ್ ನೇತೃತ್ವದ ಸರಕಾರ ತಂದಾಗ ಕರ್ನಾಟಕದಲ್ಲಿ ಬಿಜೆಪಿಯ ಬಸವರಾಜ್ ಬೊಮ್ಮಾಯಿ ನೇತೃತ್ವದ ಸರಕಾರ ಅದನ್ನು ವಿರೋಧಿಸಿದ್ದು, ತದನಂತರ ಬದಲಾದ ರಾಜಕೀಯ ಸನ್ನಿವೇಶದಲ್ಲಿ ರಾಜ್ಯದಲ್ಲಿ ಮೇ ತಿಂಗಳಲ್ಲಿಯೇ ಸಿದ್ದರಾಮಯ್ಯ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದರೂ ನೀಟ್ ಪರೀಕ್ಷಾ ವಿಧಾನದ ಬಗ್ಗೆ ಚಕಾರ ಎತ್ತಲಿಲ್ಲ. ಹಿಂದುಳಿದ ವರ್ಗಗಳ ನಾಯಕ ಡಾ. ಎಮ್. ವೀರಪ್ಪ ಮೊಯ್ಲಿಯವರು ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿಕೊಡುವ ಉದ್ದೇಶದಿಂದ ಜಾರಿ ತಂದ ಸಿ.ಇ.ಟಿ ಪರೀಕ್ಷಾ ವಿಧಾನವನ್ನೇ ಕರ್ನಾಟಕದಲ್ಲಿ ಮೂಡಿಸಿಕೊಳ್ಳಲು ಅಹಿಂದ ನಾಯಕರೆನಿಸಿಕೊಂಡ ಸಿದ್ದರಾಮಯ್ಯರವರು ಯಾಕೆ ಪ್ರಯತ್ನಿಸಲಿಲ್ಲ? ಈ ಬಗ್ಗೆ ಕಾಂಗ್ರೇಸ್ ನಾಯಕರುಗಳು ಸ್ವಷ್ಟಪಡಿಸಲಿ. ಇತ್ತೀಚೆಗೆ ಕಾರ್ಕಳದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರು ನೀಟ್ ಪರಿಕ್ಷೇಯನ್ನು ಈಗಿನ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಹೇರಿದ್ದು, ಎಂದು ಹೇಳಿರುವುದು ಅವರಿಗಿರುವ ಮಾಹಿತಿಯ ಕೊರತೆಯನ್ನು ತೋರಿಸುತ್ತದೆ. ಕಾರ್ಕಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರ ಮಾತು ಅಳವಿಲ್ಲದೆ ಹರಟುವ ಮೇಲ್ಮೆöÊ ಮಾತಿನಂತಾಗದಿರಲಿ. ಕರ್ನಾಟಕದಲ್ಲಿ ಕಾಂಗ್ರೇಸ್ ನೇತೃತ್ವದ ಸರಕಾರ ಇದ್ದ ಸಂಧರ್ಭದಲ್ಲಿ 2016 ರಲ್ಲಿ ಎರಡು ಬಾರಿ ಪಿ.ಯು.ಸಿ ಪ್ರಶ್ನೆ ಪತ್ರಿಕೆ ಸೋರಿಕೆಯಾದಾಗ ಜವಾಬ್ದಾರಿಯನ್ನು ಪಿ.ಯು.ಸಿ ಮಂಡಳಿಯ ತಲೆಗೆ ಕಟ್ಟಿರುವ ನಿಮಗೆ ಈ ಬಗ್ಗೆ ಮಾತನಾಡಲು ನೈತಿಕತೆ ಇದೆಯೇ? ಎಮದು ರವೀಂದ್ರ ಮೊಯಿಲಿ ಪತ್ರಿಕಾ ಹೇಳಿಕೆಯಲ್ಲಿ ಪ್ರಶ್ನಿಸಿದ್ದಾರೆ.




.
.
.
.
.
.
.
.
.
.
.
.
.
.
.
.
.
.
.
.
