Share this news

ಕಾರ್ಕಳ,21: ಹುಚ್ಚುಕೋಡಿ ಮನಸ್ಸು ಅದು ಹದಿನಾರರ ವಯಸ್ಸು ಎಂಬಂತೆ ಇಲ್ಲೊಬ್ಬಳು ಯುವತಿ ಕಾಲೇಜು ಓದುತ್ತಿರುವಾಗಲೇ ಇನ್ಸ್ಟಾಗ್ರಾಂ ಹುಚ್ಚಿನಿಂದ ಪ್ರೀತಿಪ್ರೇಮದ ಸುಳಿಗೆ  ಸಿಲುಕಿ  ಬಳಿಕ  ಗೆಳೆತನ ಬಿಡು ಎಂದಾಗ ಕೆರಳಿದ ಆತ ಆಕೆಗೆ ಹಲ್ಲೆ ನಡೆಸಿ ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ ಎಂದು ಆರೋಪಿಸಿ ಇದೀಗ ಆಕೆಯ ತನ್ನ ಗೆಳೆಯನ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ್ದಾಳೆ.

ಕಾರ್ಕಳ ನಗರದ ಯುವತಿ ಸರ್ಕಾರಿ ಕಾಲೇಜಿನಲ್ಲಿ ದ್ವಿತೀಯ ಬಿ.ಕಾಂ ಓದುತ್ತಿದ್ದ ಸಂದರ್ಭದಲ್ಲಿ ಆಕೆಗೆ ಇನ್ಸ್ಟಾಗ್ರಾಂ ಮೂಲಕ ಬಜಗೋಳಿಯ ಎಂಬ ಯುವಕನ ಪರಿಚಯವಾಗಿತ್ತು. ಚಾಟಿಂಗ್ ಮೂಲಕ ಆರಂಭವಾದ ಗೆಳೆತನ ಪರಸ್ಪರ ವಾಟ್ಸಾಪ್ ನಂಬರ್ ಎಕ್ಸ್ ಚೇಂಜ್ ಗೆ ಹೆಚ್ಚು ಸಮಯ ಹಿಡಿಯಲಿಲ್ಲ‌. ಬಳಿಕ ಇವರಿಬ್ಬರ ಗೆಳೆತನ ದಿನಕಳೆದಂತೆ ಪ್ರೀತಿಯಾಗಿ ಬದಲಾಗಲು ಹೆಚ್ಚು ಸಮಯ ಕಳೆಯಲಿಲ್ಲ. ಪ್ರೀತಿಪ್ರೇಮದ ಗುಂಗಿನಲ್ಲಿ ಆಕೆ ಅವನೊಂದಿಗೆ ಬಿಂದಾಸಾಗು ಸಾಕಷ್ಟು ತಿರುಗಾಡಿದ್ದಳು‌. ಕೊನೆಗೆ ಒಂದು ದಿನ ಆತನಲ್ಲಿ ನನ್ನ ಜೊತೆ ಗೆಳೆತನ ಬಿಡುವಂತೆ ಮೆಸೇಜ್ ಮಾಡದಂತೆ ಹೇಳಿದಾಗ ಆತ ಮಾತ್ರ ಬಿಡಲು ಒಪ್ಪಲು ಸಿದ್ದನಿರಲಿಲ್ಲ.

ಕಳೆದ ಜುಲೈ 15 ರಂದು ಯುವಕ ಆಕೆಗೆ ಕರೆ ಮಾಡಿ ಕಾರ್ಕಳ ಬಸ್ ನಿಲ್ದಾಣಕ್ಕೆ ಬಾ ಬಂದು ಆಕೆಯನ್ನು ಕರೆದು ಬಳಿಕ ಆಕೆಗೆ ಕಿಂಗ್ಸ್ ಬಾರ್ ಗೆ ಊಟಕ್ಕೆ ಕರೆದೊಯ್ದು ಅಲ್ಲಿ ಇವರಿಬ್ಬರ ನಡುವೆ ವಾಗ್ವಾದ ಜಗಳ ನಡೆದು ಆತ ಯುವತಿಗೆ ಹೊಡೆದು ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ಮಾಡಿ ವಿಡಿಯೋ ಹರಿಯಬಿಡುವುದಾಗಿ‌ ಬೆದರಿಕೆ ಹಾಕಿದ್ದಾನೆ ಮಾತ್ರವಲ್ಲದೇ ವಿದೇಶಕ್ಕೆ ಹೋಗುವ ಮುನ್ನ ನಿನ್ನನ್ನು ಬಿಡುವುದಿಲ್ಲ ಎಂದು ಆವಾಜ್ ಹಾಕಿದ್ದ ಅಲ್ಲದೇ ಆತನಲ್ಲಿರುವ ನನ್ನ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವ ಸಾಧ್ಯತೆ ಇರುವುದರಿಂದ ಆತನ ವಿರುದ್ಧ ಯುವತಿ ಕಾರ್ಕಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಯುವತಿ ‌ನೀಡಿದ ದೂರಿನ ಮೇರೆಗೆ ಬಜಗೋಳಿಯ ಯುವಕನ ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.

ವಯಸ್ಸಲ್ಲದ ವಯಸ್ಸಿನಲ್ಲಿ ಅರಳುವ ಪ್ರೀತಿ ಮುಂದೆ ಭಾರೀ ಅನಾಹುತಕ್ಕೆ ಕಾರಣವಾಗುವ ಸಾಧ್ಯತೆಯಿದೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳ ಮೊಬೈಲ್ ಮೇಲೆ ಹಾಗೂ ಅವರ ಚಲನವಲನಗಳ ಬಗ್ಗೆ ನಿಗಾ ಇಡಬೇಕು. ಜೀವನ ಮೌಲ್ಯ, ಸಂಸ್ಕಾರದ ಕೊರತೆಯಿಂದ ಮಕ್ಕಳು ಸಮಾಜದಲ್ಲಿ ಪ್ರೀತಿ ಪ್ರಣಯ ಎನ್ನುವ ಆಕರ್ಷಣೆಗೆ ಒಳಗಾಗುತ್ತಾರೆ.ಪೋಷಕರು ಆದಷ್ಟು ತಮ್ಮ ಬಿಡುವಿನ ಸಮಯದಲ್ಲಿ ಮೊಬೈಲ್ ಟಿವಿ ಬಿಟ್ಟು ಮಕ್ಕಳ ಜೊತೆ ಬೆರೆಯಬೇಕು.ಇದರಿಂದ ಮಕ್ಕಳಿಗೆ ಜೀವನ ಮೌಲ್ಯ ತಿಳಿಯುತ್ತದೆ. ಯಾಕೆಂದರೆ ನಿಮ್ಮ ಮಕ್ಕಳ ಭವಿಷ್ಯ ನಿಮ್ಮ ಕೈಯಲ್ಲೇ ಇದೆ.

 

   

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

                                       

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

Leave a Reply

Your email address will not be published. Required fields are marked *