
ಹೆಬ್ರಿ,ಜ.9: ವ್ಯಕ್ತಿಯೊಬ್ಬರಿಗೆ ಬಜಾಜ್ ಫೈನಾನ್ಸ್ ಹೆಸರಿನಲ್ಲಿ ಕರೆಮಾಡಿ ಸಾಲ ಕೊಡುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚಿಸಿರುವ ಪ್ರಕರಣ ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಸೋಮೇಶ್ವರ ದಲ್ಲಿ ಬೆಳಕಿಗೆ ಬಂದಿದೆ.
ನಾಡ್ಪಾಲು ಗ್ರಾಮದ ಸೋಮೇಶ್ವರ ನಿವಾಸಿ ರಮೇಶ ಎಂಬವರಿಗೆ ಜ.2 ರಂದು ಬಜಾಜ್ ಫೈನಾನ್ಸ್ ನಿಂದ ರವಿ ಕುಮಾರ್ ಎಸ್ ಎಂದು ಹೇಳಿ 9006819608 ನಂಬರಿನಿಂದ ವ್ಯಕ್ತಿಯೊಬ್ಬ ಕರೆಮಾಡಿ, ನಾವು ಆನ್ಲೈನ್ ನಲ್ಲಿ ಸಾಲ ಕೊಡುತ್ತೇವೆ ಎಂದು ನಂಬಿಸಿದ್ದ.
ಇತ್ತ ರಮೇಶ್ ಅವರಿಗೆ ಸಹೋದರಿಯ ಮದುವೆ ಇದ್ದ ಕಾರಣ ಹಣದ ಅವಶ್ಯಕತೆ ಇದ್ದು, ಸಾಲ ಪಡೆಯಲು ಮುಂದಾಗಿದ್ದಾರೆ. ಆಗ ಕರೆ ಮಾಡಿದ್ದ ವ್ಯಕ್ತಿ 3 ಶೇ. ಬಡ್ಡಿ ಎಂದು ಹೇಳಿದ್ದು, 5 ವರ್ಷಕ್ಕೆ ಪ್ರತಿ ತಿಂಗಳು 6289 ರೂ. ಕಟ್ಟಲು ಬರುತ್ತದೆ ಎಂದು ರಮೇಶ್ ಅವರಿಂದ ಹಂತ ಹಂತವಾಗಿ 36 ಟ್ರಾಂಜೆಕ್ಷನ್ ಮೂಲಕ ಒಟ್ಟು ರೂ.2,19,500 ನಗದನ್ನು ವರ್ಗಾವಣೆ ಮಾಡಿಸಿಕೊಂಡು ವಂಚನೆ ಎಸಗಿದ್ದಾನೆ.
ಈ ಕುರಿತು ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

.
.
