
ಹೆಬ್ರಿ,ಡಿ12: ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಲ್ಕೂರು ಗ್ರಾಮದ ಚಾಕ್ಟಿಕಟ್ಟೆ ಪೇಟೆಯ ಬಳಿ ಮಟ್ಕಾ ಜುಗಾರಿ ಆಡುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಹೆಬ್ರಿ ಠಾಣಾ ಪೊಲೀಸ್ ಉಪನಿರೀಕ್ಷಕರಾದ (ತನಿಖೆ) ಚಂದ್ರ ಎ ಕೆ ಅವರಿಗೆ ಬಂದ ಮಾಹಿತಿಯ ಮೇರೆಗೆ ಡಿ.11 ರಂದು ದಾಳಿ ನಡೆಸಿದಾಗ ಬ್ರಹ್ಮಾವರ ಕುದಿ ಗ್ರಾಮದ ಶಂಕರ ನಾಯ್ಕ ಎಂಬವರು ಜುಗಾರಿ ಆಡುತ್ತಿದ್ದು, ಅವರಿಂದ ಆಟದಿಂದ ಸಂಗ್ರಹಿಸಿದ ನಗದು ಹಾಗೂ ಇನ್ನಿತರ ಪರಿಕರಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
.
.
