ಹೆಬ್ರಿ: ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಕೈಕಂಬ ಎಂಬಲ್ಲಿ ಮನೆಯ ಗೇಟ್ ಬಳಿ ನಿಂತಿದ್ದ ದನವನ್ನು ದುಷ್ಕರ್ಮಿಗಳು ಕಳವುಗೈದ ಪ್ರಕರಣ ಬೆಳಕಿಗೆ ಬಂದಿದೆ. ಕೈಕAಬದ ಬೃಂದಾವನ ಮನೆಯ ಸಿಸಿಟಿವಿಯಲ್ಲಿ ಗೇಟ್ ಬಳಿ ನಂತಿದ್ದ ದನವನ್ನು ಕಳವುಗೈದಿರುವುದು ಬೆಳಕಿಗೆ ಬಂದಿದೆ.
ಮನೆಯ ಗೇಟ್ ಬಳಿ ನಿಂತಿದ್ದ ದನವನ್ನು ದುಷ್ಕರ್ಮಿಗಳು ತೆಗೆದುಕೊಂಡು ಹೋಗಿದ್ದಾರೆ ಎಂದು ಮಾಹಿತಿ ಬಂದ ಹಿನ್ನಲೆಯಲ್ಲಿ ಹೆಬ್ರಿ ಪೊಲೀಸ್ ಠಾಣಾ ಎಸ್‌ಐ ಮಹೇಶ್ ಟಿ.ಎಮ್ ಅವರು ಕೂಡಲೇ ಸ್ಥಳಕ್ಕೆ ಧಾವಿಸಿ ಸಿಸಿಟಿವಿ ಪರಿಶೀಲಿಸಿದಾಗ, ಸೆ.24 ರಂದು ಬೆಳಿಗ್ಗಿನ ಜಾವ ಸಮಯ 03:15 ಗಂಟೆಗೆ ಕೈಕಂಬ ಸರ್ಕಲ್‌ನ ಬೃಂದಾವನ ಮನೆಯ ಗೇಟಿನ ಮುಂಭಾಗ ನಿಂತಿದ್ದ ಒಂದು ದನವನ್ನು ರಿಟ್ಜ್ ವಾಹನದಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಮುಸಕು ಹಾಕಿಕೊಂಡು ಗೇಟಿನ ಮುಂಭಾಗ ನಿಂತಿದ್ದ ದನವನ್ನು ಹಿಡಿದು ಅದನ್ನು ಕಾರಿಗೆ ಹಿಂಸಾತ್ಮಕವಾಗಿ ತುಂಬಿಸಿ ಮಾಂಸ ಮಾಡುವ ಉದ್ದೇಶದಿಂದ ಕಳ್ಳತನ ಮಾಡಿಕೊಂಡು ಹೋಗಿರುವುದು ತಿಳಿದು ಬಂದಿದೆ.
ಈ ಕುರಿತು ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
in