ಹೆಬ್ರಿ: ಟಿವಿಎಸ್ ಮೊಪೆಡ್ ಗೆ ಮಹೀಂದ್ರಾ ಪಿಕಪ್ ಡಿಕ್ಕಿಯಾಗಿ ಮೊಪೆಡ್ ಸವಾರ ಮೃತಪಟ್ಟ ಘಟನೆ ಹೆಬ್ರಿ ತಾಲೂಕಿನ ಚಾರ ಎಂಬಲ್ಲಿ ಶುಕ್ರವಾರ ಸಂಭವಿಸಿದೆ. ಮೊಪೆಡ್ ಸವಾರ ಸೀತಾರಾಮ ಮೃತಪಟ್ಟಿದ್ದಾರೆ. ಸೀತಾರಾಮ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಚಾರ ಕಡೆಯಿಂದ ತನ್ನ ಟಿವಿಎಸ್ ಎಕ್ಸೆಲ್ ಮೊಪೆಡ್ ನಲ್ಲಿ ಚಾರ ಕಡೆಯಿಂದ ಹೆಬ್ರಿ ಕಡೆಗೆ ಹೋಗುತ್ತಿದ್ದ ವೇಳೆ ಪಿಕಪ್ ಚಾಲಕ ಜಗದೀಶ್ ಅತೀವೇಗವಾಗಿ ಓವರ್ ಟೇಕ್ ಮಾಡಿಕೊಂಡು ಹೋಗುವಾಗ ಪಿಕಪ್ ವಾಹನದ ಹಿಂಭಾಗವು ಮೊಪೆಡ್ ಸವಾರ ಸೀತಾರಾಮ ಅವರಿಗೆ ಡಿಕ್ಕಿಯಾಗಿ ರಸ್ತೆಗೆ ಬಿದ್ದು ಅವರ ತಲೆಗೆ ಗಂಭೀರ ಗಾಯಗಳಾಗಿ ಆಸ್ಪತ್ರೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ.
ಪಿಕಪ್ ಚಾಲಕ ಜಗದೀಶ್ ಅವರ ನಿರ್ಲಕ್ಷö್ಯತನದ ಚಾಲನೆಯೇ ಈ ಅಪಘಾತಕ್ಕೆ ಕಾರಣವಾಗಿದ್ದು, ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.