
ಅಜೆಕಾರು, ಜ.26: ಹಿಂದೂ ಸಮಾಜ ಎಂದಿಗೂ ದ್ವೇಷವನ್ನು ಉತ್ತೇಜಿಸಿಲ್ಲ, ಯಾರೊಂದಿಗೂ ದ್ವೇಷವನ್ನು ಸಾಧಿಸಿಲ್ಲ.ಸಮಾಜದಲ್ಲಿ ಸಹಬಾಳ್ವೆಯೊಂದಿಗೆ ಜೀವನ ನಡೆಸುತ್ತಿದೆ. ಆದರೆ ಪ್ರಸಕ್ತ ದಿನಗಳಲ್ಲಿ ಹಿಂದೂಗಳಲ್ಲಿನ ಜಾತಿಗಳನ್ನು ಒಡೆಯುವ ಮಹಾಸಂಚು ನಡೆಯುತ್ತಿದೆ,ಇಂತಹ ಪ್ರಯತ್ನದ ವಿರುದ್ಧ ಸಮಸ್ತ ಹಿಂದೂ ಸಮಾಜ ಜಾಗೃತವಾಗಬೇಕಿದೆ ಎಂದು RSS ಕಾರ್ಯವಾಹ ವಾದಿರಾಜ ಭಟ್ ಗೋಪಾಡಿ ಹೇಳಿದರು.
ಅವರು ಅಜೆಕಾರಿನಲ್ಲಿ ಜ.25 ರಂದು ಭಾನುವಾರ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹೂವಿನ ತೋಟದಲ್ಲಿ ಬಗೆಬಗೆಯ ಹೂವುಗಳು ಇದ್ದರೆ ತೋಟದ ಸೊಬಗು ಹೆಚ್ಚುತ್ತದೆ ,ಈ ಬಗೆಬಗೆಯ ಹೂವುಗಳು ಒಟ್ಟಾಗಿ ಅಂತಿಮವಾಗಿ ದೇವರಿಗೆ ಅರ್ಪಣೆಯಾದಂತೆ, ಸಮಾಜದಲ್ಲಿನ ವಿವಿಧ ಜಾತಿಗಳು ಕೂಡ ವಿಭಿನ್ನ ಆಚಾರ,ವಿಚಾರ, ಸಂಸ್ಕೃತಿಗಳನ್ನು ಬಿಂಬಿಸುತ್ತವೆ. ಅಂತಿಮವಾಗಿ ಎಲ್ಲಾ ಜಾತಿಗಳು ಹಿಂದೂ ಆಚರಣೆಯ ಮೂಲಕ ಒಂದಾಗುತ್ತವೆ ಎಂದು ಅರ್ಥಪೂರ್ಣವಾಗಿ ವಿವರಿಸಿದರು.
ಹಿಂದೂ ಧರ್ಮಕ್ಕೆ ಲಕ್ಷಾಂತರ ವರ್ಷಗಳ ಇತಿಹಾಸವಿದೆ, ಜಗತ್ತಿಗೆ ಅನೇಕ ದಾರ್ಶನಿಕರನ್ನು ಕೊಡುಗೆ ನೀಡಿದ ,ಜಗತ್ತಿಗೆ ಜೀವನ ಧರ್ಮವನ್ನು ಬೋಧಿಸಿದ ಹಿಂದೂ ಸಮಾಜ ಇಂದಿಗೂ ಅಚ್ಚಳಿಯದೇ ನಿಂತಿದೆ. ಆದರೂ ಹಿಂದೂ ಸಮಾಜವನ್ನು ಒಡೆಯುವ ವಿಕೃತ ಮನಸ್ಸಿನವರು ನಮ್ಮ ಸಮಾಜದಲ್ಲಿದ್ದಾರೆ ಇದರ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದರು. ಭಾರತದ ಪ್ರಜಾಪ್ರಭುತ್ವ ಇಡೀ ಜಗತ್ತಿಗೆ ಮಾದರಿ. ನಮ್ಮ ದೇಶವನ್ನು ಒಡೆಯಲು ಕಾಯುವವರ ನಡುವೆಯೂ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಅತ್ಯಂತ ಗಟ್ಟಿಯಾಗಿದೆ.ನಾವೆಲ್ಲರೂ ಬಲಿಷ್ಠ ಭಾರತ ನಿರ್ಮಾಣಕ್ಕೆ ಕೈಜೋಡಿಸಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾಡುಹೊಳೆ ಜಂಗಮೇಶ್ವರ ಮಠದ ಪ್ರಧಾನ ಅರ್ಚಕರು ಹಾಗೂ ವಾಗ್ಮಿಗಳಾದ ರಾಘವೇಂದ್ರ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಉದ್ಯಮಿ ಬಾಲಕೃಷ್ಣ ಹೆಗ್ಡೆ ಅಜೆಕಾರು,ಪ್ರಸನ್ನ ಇಂದ್ರ, ಶಂಕರ ಆಚಾರ್ಯ, ಎಣ್ಣೆಹೊಳೆ ಜಂಗಮೇಶ್ವರ ಮಠದ ಅರ್ಚಕ ರಾಜೇಂದ್ರ ಎಣ್ಣೆಹೊಳೆ, ಕೃಷ್ಣ ಮೇರ , ಶೀನ ಗೌಡ ಅಂಡಾರು, ಕೊರಗ ಪಾಣಾರ, ನಿವೃತ್ತ ಶಿಕ್ಷಕ ಭಾಸ್ಕರ ಶೆಟ್ಟಿ ಕುಂಠಿನಿ, ಆನಂದ ಹೆಗ್ಡೆ ಹೆರ್ಮುಂಡೆ, ರವೀಂದ್ರ, ಪಿ, ಕೃಷ್ಣ ಶೆಟ್ಟಿಗಾರ್ ಎಣ್ಣೆಹೊಳೆ, ಗಣಪತಿ ಭಂಡಾರಿ ಅಜೆಕಾರು, ಶಂಕರ ಶೇರಿಗಾರ್,ನಿವೃತ್ತ ಶಿಕ್ಷಕ ಜನಾರ್ಧನ್ ನಾಯ್ಕ್, ಉದ್ಯಮಿ ತಾರಾನಾಥ ಪೂಜಾರಿ,ಅಜೆಕಾರು ವಿಷ್ಣುಮೂರ್ತಿ ಭಜನಾ ಮಂಡಳಿ ಸ್ಥಾಪಕರಾದ ಭೋಜ ಮಡಿವಾಳ, ಮೋಹನ್ ದಾಸ್ ಜೋಗಿ,ಸದಾಶಿವ ಸಫಲಿಗ,ವಿನಿಲ್ ರಾಣೆ, ಬಾಲಕೃಷ್ಣ. ಪಿ, ಮುಂತಾದವರು ಉಪಸ್ಥಿತರಿದ್ದರು.
ಅರ್ಪಿತಾ ಸ್ವಾಗತಿಸಿ,ಸುಕೇಶ್ ಶೆಟ್ಟಿ ಎಣ್ಣೆಹೊಳೆ ವಂದಿಸಿದರು. ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.
ಹರೀಶ್ ನಾಯಕ್, ಪ್ರಶಾಂತ ಶೆಟ್ಟಿ, ರತ್ನಾಕರ ಅಮೀನ್, ಜಗದೀಶ್ ಶೆಟ್ಟಿ, ನಂದಕುಮಾರ್ ಹೆಗ್ಡೆ ಮುಂತಾದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ವಿವಿಧ
ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ಹಾಗೂ ನೂರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ಸಾಗಿಬಂದರು.

.
.
.
.
