
ಕಾರ್ಕಳ: ತಾಲೂಕಿನ ಹಿರ್ಗಾನ ಗ್ರಾಮದ ತುಂಬೆಹಿತ್ಲು ಎಂಬಲ್ಲಿ ಬಾಡಿಗೆ ಮನೆಯ ಕೆಳ ಅಂತಸ್ತಿನ ಅಂಗಡಿಯ ಎದುರು ರಾತ್ರಿ ನಿಲ್ಲಿಸಿದ್ದ ಬೈಕನ್ನು ಕಳ್ಳರು ಕಳವುಗೈದಿರುವ ಘಟನೆ ನಡೆದಿದೆ.
ಸತೀಶ್ ಆಚಾರ್ಯ ಎಂಬವರು ತಮ್ಮ ಬೈಕನ್ನು ನ.15 ರಂದು ರಾತ್ರಿ ಅಂಗಡಿಯ ಎದುರು ನಿಲ್ಲಿಸಿ ಹೋಗಿದ್ದು, ನ.17 ರ ಬೆಳಿಗ್ಗೆ ಬಂದು ನೋಡಿದಾಗ ಬೈಕ್ ಕಳುವಾಗಿರುತ್ತದೆ.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
