
ಕಾರ್ಕಳ: ಕಾರ್ಕಳ – ಹೆಬ್ರಿ ಮುಖ್ಯರಸ್ತೆಯ ಹಿರ್ಗಾನ ಎಂಬಲ್ಲಿ ಬೈಕ್ ಸ್ಕಿಡ್ ಆದ ಪರಿಣಾಮ ಸವಾರರಿಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹರೀಶ್ ಎಂಬವರು ನ.16 ರಂದು ಬೆಳಿಗ್ಗೆ ಕಾರಿಗೆ ಸೈಡ್ ಕೊಡುವ ವೇಳೆ ಬೈಕನ್ನು ರಸ್ತೆಯಿಂದ ಕೆಳಗೆ ಇಳಿಸಿ ಮತ್ತೆ ಹತ್ತಿಸುವ ವೇಳೆ ಈ ಅಪಘಾತ ನಡೆದಿದ್ದು, ಹರೀಶ್ ಹಾಗೂ ಸಹಸವಾರೆ ಕಮಲೇಶ್ವರಿ ಪಾಸ್ವಾನ್ ಇಬ್ಬರೂ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

