ಗಂಡ ಹೆಂಡತಿಯ ಜಗಳಕ್ಕೆ 6 ವರ್ಷದ ವಿನೋದ್ ಮಾತು ಬಾರದ ಮಗು ಪ್ರಾಣವನ್ನೇ ಕಳೆದುಕೊಂಡಿದೆ.
ರವಿಕುಮಾರ್ ಹಾಗೂ ಸಾವಿತ್ರಿ ಎಂಬ ದಂಪತಿ ನಡುವೆ
ಪ್ರತೀ ಬಾರಿ ಗಲಾಟೆಯಾದಾಗಲೂ ಮಗು ಸಾಯಲಿ ಅಂತಾ ಗಂಡ ರವಿಕುಮಾರ್ ಬೈಯ್ಯುತ್ತಿದ್ದ. ಹೀಗಾಗಿ ಗಂಡನ ಜತೆ ಗಲಾಟೆಯ ಕೋಪದಲ್ಲಿ ಮಗುವನ್ನು ಎತ್ತಿಕೊಂಡು ಹೋದ ತಾಯಿ ಸಾವಿತ್ರಿ ನಾಲೆಗೆ ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶನಿವಾರ ರಾತ್ರಿ ಗಂಡ ರವಿಕುಮಾರ್ ಜೊತೆ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿದ್ದ ಸಾವಿತ್ರಿ, ಕೋಪದಲ್ಲಿ ಮಗುವನ್ನು ಮೊಸಳೆಗಳಿದ್ದ ನಾಲೆಗೆ ಎಸೆದು ನಂತರ ಪಶ್ಚಾತಾಪದಿಂದಾಗಿ ಘಟನೆ ಬಗ್ಗೆ ಬಾಯಿ ಬಿಟ್ಟಿದ್ದಾಳೆ. ಮೊಸಳೆ ಬಾಯಲ್ಲಿ 6 ವರ್ಷದ ಮಗು ವಿನೋದ್ ಸಾವಿಗೀಡಾಗಿದೆ. ನಿನ್ನೆ ರಾತ್ರಿಯಿಂದ ಶವವನ್ನು ತೆಗೆಯಲು ಮುಳುಗು ತಜ್ಞರಿಂದ ಶೋಧ ಕಾರ್ಯ ಮುಂದುವರೆದಿದ್ದು, ಕೊನೆಗೂ ಮಗುವಿನ ಮೃತದೇಹ ಸಿಕ್ಕಿದೆ.
ಮಗುವಿನ ಬಲಗೈಯನ್ನು ಮೊಸಳೆ ಕಚ್ಚಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.ಸದ್ಯ ಆರೋಪಿಗಳಾದ ರವಿ ಕುಮಾರ್ ಹಾಗೂ ಸಾವಿತ್ರಿ ದಂಪತಿಯನ್ನು ದಾಂಡೇಲಿ ಪೊಲೀಸರು ಬಂಧಿಸಿದ್ದು, ಆರೋಪಿಗಳ ವಿರುದ್ಧ ದಾಂಡೇಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
