ಬೆಂಗಳೂರು,ಸೆ 09: ರೇಣುಕಾ ಸ್ವಾಮಿಯನ್ನು ಅತ್ಯಂತ ಕ್ರೂರವಾಗಿ ಕೊಲೆ ಮಾಡಿದ ನಟ ದರ್ಶನ್ ಗೆ ಹೈಕೋರ್ಟ್ ನೀಡಿದ್ದ ಜಾಮೀನನ್ನು ರದ್ದುಪಡಿಸಿದ ಸುಪ್ರೀಂ ಕೋರ್ಟ್ ಆತನಿಗೆ ಇನ್ನಷ್ಟು ಕಠಿಣ ಸಜೆ ನೀಡುವಂತೆ ಜೈಲು ಅಧಿಕಾರಿಗಳಿಗೆ ಸ್ಪಷ್ಟ ಆದೇಶ ನೀಡಿತ್ತು. ಸುಪ್ರೀಂ ಆದೇಶದಂತೆ ಯಾವುದೇ ಹೆಚ್ಚುವರಿ ಸೌಲಭ್ಯ ನೀಡದ ಕಾರಣದಿಂದ ದರ್ಶನ್ ಅಕ್ಷರಶಃ ಕುಗ್ಗಿ ಹೋಗಿದ್ದಾರೆ.
ದರ್ಶನ್ ಹಾಸಿಗೆ ದಿಂಬು ಮನೆಯ ಊಟ ವಿಚಾರಕ್ಕೆ ಸಂಬAಧಪಟ್ಟAತೆ ಮನವಿ ಸಲ್ಲಿಸಿದ್ದು ಈ ಕುರಿತು ನ್ಯಾಯಾಧೀಶರು ವಿಚಾರಣೆ ನಡೆಸಿದ ವೇಳೆ ನಟ ದರ್ಶನ್ ಕೋಡ್ ನಲ್ಲಿ ವಿಷ ಕೊಡಿ ಎಂದು ತನ್ನ ಹೊಸ ವರಸೆ ಶುರು ಮಾಡಿದ್ದಾರೆ. ಬಿಸಿಲು ನೋಡಿ ಒಂದು ತಿಂಗಳು ಆಯ್ತು, ಕೈಗಳಲ್ಲಿ ಫಂಗಸ್ ಆಗಿದೆ. ನನ್ನದೊಂದು ಮನವಿ ಇದೆ ಸ್ವಲ್ಪ ಪಾಯಿಸನ್ ಬೇಕು, ನನಗೆ ವಿಷ ಕೊಡಿ ಎಂದು ಮನವಿ ಮಾಡಿದ್ದಾರೆ ಎನ್ನುವ ತಿಳಿದು ಬಂದಿದೆ. ಈ ವೇಳೆ ಜಡ್ಜ್ ಹಾಗೆಲ್ಲ ಕೇಳಬಾರದು ಅಂತ ಹೇಳಿದ್ದಾg,ೆ ನಿಮ್ಮ ಮನವಿ ಬಗ್ಗೆ ಮಧ್ಯಾಹ್ನ ಆದೇಶ ನೀಡುತ್ತೇವೆ ಎಂದು ಜಡ್ಜ್ ತಿಳಿಸಿ ಹೇಳಿ ಇಂದು ಮಧ್ಯಾಹ್ನ 3:30ಕ್ಕೆ ಆದೇಶ ನೀಡುತ್ತೇವೆ ಎಂದು ಹೇಳಿದರು. ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವ ಕುರಿತು ಇಂದು ಆದೇಶ ಹೊರ ಬರಲಿದೆ.