Share this news

ವಿಶೇಷ ವರದಿ: ಕೃಷ್ಣ, ಎನ್ ಅಜೆಕಾರ್

ಉಡುಪಿ: ರಾಜ್ಯದಾದ್ಯಂತ ಭೀಕರ ಬರಗಾಲ ತಾಂಡವಾಡುತ್ತಿದ್ದು, ಜನರು ಹನಿ ನೀರಿಗೂ ಪರದಾಡುವ ಸ್ಥಿತಿ ಎದುರಾಗಿದೆ. ಬಡವರು ಕುಡಿಯುವ ನೀರಿಗಾಗಿ ಮೈಲುಗಟ್ಟಲೆ ಬಿಂದಿಗೆ ಹಿಡಿದು ನಡೆದರೆ, ಸಾಕಷ್ಟು ಆರ್ಥಿಕವಾಗಿ ಸ್ಥಿತಿವಂತರಲ್ಲಿ ಭೂಮಿಯ ಒಡಲು ಬಗೆದು ನೀರನ್ನು ಪಡೆಯುವ ಛಲ. ಇದನ್ನೇ ಬಂಡವಾಳವನ್ನಾಗಿಸುತ್ತಿರುವ ಬೋರ್ ವೆಲ್ ಯಂತ್ರಗಳ ಮಾಲೀಕರು ತಂಡೋಪತAಡವಾಗಿ ಉಡುಪಿ ಜಿಲ್ಲೆಗೆ ಆಗಮಿಸಿ ಸರ್ಕಾರದ ನಿಯಮಾವಳಿಗಳನ್ನೇ ಗಾಳಿಗೆ ತೂರಿ ಹಗಲುರಾತ್ರಿ ಭೂಮಿಯ ಒಡಲು ಬಗೆದು ಗಂಗೆಯನ್ನು ಹರಿಸಲು ಯತ್ನಿಸಿ ಬರಗಾಲದ ಭರಪೂರ ಲಾಭ ಪಡೆಯುತ್ತಿದ್ದಾರೆ.
ಸರ್ಕಾರದ ನಿಯಮದ ಪ್ರಕಾರ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ಮಾಲಕರು ಕೊಳವೆ ಬಾವಿ ಕೊರೆಸಬೇಕಾದರೆ ಕಡ್ಡಾಯವಾಗಿ ಅಂತರ್ಜಲ ಪ್ರಾಧಿಕಾರದ ಅನುಮತಿ ಪತ್ರ ಪಡೆಬೇಕು ಮಾತ್ರವಲ್ಲದೇ ಕೊಳವೆ ಬಾವಿ ಕೊರೆಸುವ ಸುತ್ತಲಿನ 500 ಮೀಟರ್ ವ್ಯಾಪ್ತಿಯಲ್ಲಿ ಸರ್ಕಾರಿ ಕೊಳವೆ ಬಾವಿ ಇಲ್ಲ ಎನ್ನುವ ಸ್ಥಳೀಯಆಡಳಿತದ ನಿರಾಕ್ಷೇಪಣ ಪತ್ರ ಕಡ್ಡಾಯವಾಗಿರುತ್ತದೆ. ಇದಲ್ಲದೇ ಕೊಳವೆ ಬಾವಿ ಕೊರೆಯುವ ಸಂಸ್ಥೆ ಅಥವಾ ಮಾಲೀಕ ತನ್ನ ಬೊರ್ ವೆಲ್ ಯಂತ್ರಕ್ಕೆ ಸರ್ಕಾರದಿಂದ ಕಡ್ಡಾಯವಾಗಿ ನಮೂನೆ 7ಎ ದೃಢೀಕರಣ ಪಡೆಯಬೇಕು. ಆದರೆ ಬಹುತೇಕ ರಿಗ್ಗಿಂಗ್ ಮಾಡುವ ವ್ಯಕ್ತಿಗಳು ಸರ್ಕಾರಿ ನಿಯಮಾವಳಿಗಳನ್ನು ಪಾಲಿಸದೇ ರಾತ್ರೋರಾತ್ರಿ ಹಾಗೂ ಸರ್ಕಾರಿ ರಜಾದಿನಗಳಲ್ಲಿ ಕೊಳವೆ ಬಾವಿ ಕೊರೆಸುವ ಮೂಲಕ ಅನಧಿಕೃತವಾಗಿ ರಿಗ್ಗಿಂಗ್ ಮಾಡುತ್ತಿದ್ದರೂ ಸಂಬAಧಪಟ್ಟ ಇಲಾಖೆಯ ಅಧಿಕಾರಿಗಳು ಮಾತ್ರ ಜಾಣ ಕುರುಡತನ ಪ್ರದರ್ಶನ ಮಾಡುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಿವೆ.

ಮಿತಿಮೀರಿದ ಕೊಳವೆ ಬಾವಿಗಳಿಂದ ಪಾತಾಳಕ್ಕಿಳಿದ ಅಂತರ್ಜಲ! 

ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಎಂದೂ ಕಾಡದ ಬರಗಾಲ ಇತ್ತೀಚಿನ ಕೆಲ ವರ್ಷಗಳಿಂದ ತೀವೃವಾಗಿ ಕಾಡುತ್ತಿದೆ. ಪ್ರಮುಖವಾಗಿ ಭತ್ತದ ಬೇಸಾಯದಲ್ಲಿ ಗಣನೀಯ ಇಳಿಮುಖವಾಗಿ ನೀರಿನ ಮೂಲಗಳನ್ನು ಮುಚ್ಚಿ ರಿಯಲ್ ಎಸ್ಟೇಟ್ ಉದ್ಯಮದ ಕದಂಬ ಬಾಹುಗಳು ಜಲಮೂಲಗಳನ್ನೇ ನುಂಗಿ ಹಾಕಿವೆ. ಅಂದು ಭತ್ತದ ಕೃಷಿಯ ಮೂಲಕ ನೀರು ಹೇರಳವಾಗಿ ಭೂಮಿಯ ಒಡಲಿನಲ್ಲಿ ಇಂಗಿ ಅಂತರ್ಜಲ ಮರುಪೂರಣವಾಗುತ್ತಿತ್ತು, ಕ್ರಮೇಣ ಭತ್ತದ ಕೃಷಿಯಿಂದ ಜನ ವಿಮುಖರಾಗಿ ವಾಣಿಜ್ಯ ಚಟುವಟಿಕೆಗಳತ್ತ ಮುಖ ಮಾಡಿದಾಗ ಕರೆ, ಹಳ್ಳ, ಮದಗಗಳು ಭೂಮಿಯ ಒಡಲು ಸೇರಿದ ಪರಿಣಾಮ ಜಲಮೂಲಗಳು ಬತ್ತಿ ಹೋಯಿತು. ಉಭಯ ಜಿಲ್ಲೆಗಳಲ್ಲಿ ವಾಣಿಜ್ಯ ಚಟುವಟಿಕೆಗಳು ಬೆಳೆದಂತೆಲ್ಲಾ ಬಹುಮಹಡಿಯ ಅಪಾರ್ಟ್ಮೆಂಟ್‌ಗಳು ತಲೆಎತ್ತಿ ಅದರ ಸುತ್ತ ನೀರಿಗಾಗಿ ಕೊಳವೆ ಬಾವಿಗಳನ್ನು ಕೊರೆಯಿಸಲಾಯಿತು.ಬರಗಾಲದ ತೀವೃತೆ ಹೆಚ್ಚಾದಂತೆ ನೀರಿಗಾಗಿ ಜನ ಕೊಳವೆ ಬಾವಿಯನ್ನೇ ಅವಲಂಬಿಸುವAತಾಯಿತು. ಇಂದಿನ ಲೆಕ್ಕಾಚಾರದ ಪ್ರಕಾರ ಬೇಸಗೆಯಲ್ಲಿ(ಫೆಬ್ರವರಿ-ಮೇ) ಉಡುಪಿ ಜಿಲ್ಲೆ ದಿನಕ್ಕೆ ಕನಿಷ್ಟ 60 ಕೊಳವೆ ಬಾವಿಗಳನ್ನು ಕೊರೆಯಿಸಲಾಗುತ್ತಿದೆ ಎನ್ನುವ ಮಾಹಿತಿಯಿದೆ. ಇದರಿಂದ ದಿನೇದಿನೇ ಅಂತರ್ಜಲ ಮಟ್ಟ 1 ಸಾವಿರ ಅಡಿಗಳನ್ನು ಆಳಕ್ಕೆ ಇಳಿದಿದೆ. ಮುಂದಾಗುವ ಜಲಕ್ಷಾಮದ ಭೀತಿಯನ್ನು ತಪ್ಪಿಸಲು ಜಿಲ್ಲಾಡಳಿತವು ನಿಯಮಾವಳಿ ಉಲ್ಲಂಘಿಸಿ ಬೇಕಾಬಿಟ್ಟಿ ಕೊಳವೆ ಬಾವಿ ಕೊರೆಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು ಅಲ್ಲದೇ ಕೊಳವೆ ಬಾವಿಗಳಿಗೆ ಜಲಮರುಪೂರಣ ಮಾಡುವ ನಿಟ್ಟಿನಲ್ಲಿ ಮಳೆ ನೀರಿನ ಕೊಯ್ಲು, ಇಂಗು ಗುಂಡಿ ವ್ಯವಸ್ಥೆಯನ್ನು ಕಡ್ಡಾಯವಾಗಿ ನಿರ್ಮಿಸಿಕೊಳ್ಳಬೇಕೆಂದು ಖಡಕ್ ಆದೇಶ ಮಾಡಿದ್ದಲ್ಲಿ ನೀರಿನ ಬವಣೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ

 

Leave a Reply

Your email address will not be published. Required fields are marked *