
ಕಾರ್ಕಳ,ಜ. 06: ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಸಾಗಿಸುತ್ತಿದ್ದ ಮರಳನ್ನು ಟಿಪ್ಪರ್ ಸಹಿತ ಕಾರ್ಕಳ ನಗರ ಠಾಣಾ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವಿನ್ಸೆಂಟ್ ಎಂಬಾತ ಬ್ರಹ್ಮಾವರದ ಚೇರ್ಕಾಡಿ ಇರ್ಮುಗೋಡು ಎಂಬಲ್ಲಿ ಹೊಳೆಯಿಂದ ಅಕ್ರಮವಾಗಿ ತೆಗೆದ ಮರಳನ್ನು ಮಹಮ್ಮದ್ ಇರ್ಫಾನ್ ಎಂಬಾತನ ಟಿಪ್ಪರ್ ನಲ್ಲಿ ಸಮ್ಯೇಗ್ದ್ ಜೈನ್ ಎಂಬಾತ ಜ.5 ರಂದು ಕಾರ್ಕಳದ ಪುಲ್ಕೇರಿ ಕಡೆಗೆ ಸಾಗಿಸುತ್ತಿದ್ದಾಗ ಕಾಬೆಟ್ಟು ಅತ್ತೂರು ಚರ್ಚ್ ದ್ವಾರದ ಬಳಿ ದಾಳಿ ನಡೆಸಿದ ಪೊಲೀಸರು 5 ಲಕ್ಷ ಮೌಲ್ಯದ ಟಿಪ್ಪರ್ ಸಹಿತ ರೂ.9000 ಮೌಲ್ಯದ ಮರಳನ್ನು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

.
.
