Share this news

ಹೆಬ್ರಿ: ನಾಲ್ಕೂರು ಗ್ರಾಮದ ಕಜ್ಕೆ ಬೈಲು ಎಂಬಲ್ಲಿನ ಸ್ಫೋಟಕ ಬಳಸಿ ಅಕ್ರಮ ಗಣಿಗಾರಿಕೆ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಕಜ್ಕೆ ಬೈಲು ಎಂಬಲ್ಲಿ ಸ್ಪೋಟಕ ಬಳಸಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ಬಂದ ಹಿನ್ನಲೆಯಲ್ಲಿ ಹೆಬ್ರಿ ಪೊಲೀಸ್ ಉಪನಿರೀಕ್ಷಕರಾದ ಮಹೇಶ್ ಟಿ.ಎಂ ಅವರು ಸಿಬ್ಬಂದಿಯವರೊAದಿಗೆ ನಾಲ್ಕೂರು ಗ್ರಾಮದ ಕಜ್ಕೆ ಬೈಲು ಎಂಬಲ್ಲಿಗೆ ಹೋದಾಗ ಇಬ್ಬರು ವ್ಯಕ್ತಿಗಳು ಕಲ್ಲಿನ ಕ್ವಾರಿಯಲ್ಲಿ ಕಲ್ಲುಗಳನ್ನು ಒಡೆಯುತ್ತಿದ್ದವರು ಅಲ್ಲಿಂದ ಓಡಿ ಪರಾರಿಯಾಗಿದ್ದಾರೆ. ಪರಾರಿಯಾದ ಇಬ್ಬರಲ್ಲಿ ಓರ್ವ ನಾಲ್ಕೂರು ಗ್ರಾಮದ ಕೃಷ್ಣ ಎಂದು ತಿಳಿದು ಬಂದಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿದಾಗ ಅಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿರುವುದು ದೃಢಪಟ್ಟಿದೆ.

ನಂತರ ಪೊಲೀಸರ ತಂಡ ಸಮೀಪದ ಕಜ್ಕೆ ಮರಕೊಂಬೆ ಎಂಬಲ್ಲಿರುವ ಕೋರೆಯಲ್ಲಿ ಗಣಿಗಾರಿಕೆ ನಡೆಯುತ್ತಿದೆಯೇ ಎಂದು ಪರಿಶೀಲಿಸಿದಾಗ ಸೀತಾರಾಮ ಎಂಬವರ ಮನೆ ಬಳಿ ಓರ್ವ 407 ಟೆಂಪೊವನ್ನು ಚಲಾಯಿಸಿಕೊಂಡು ಬರುತ್ತಿದ್ದವನು ಪೊಲೀಸರನ್ನು ನೋಡಿ ಟೆಂಪೊ ನಿಲ್ಲಿಸಿ ಪರಾರಿಯಾಗಿದ್ದಾನೆ. ಪೊಲೀಸರು ಲಾರಿಯನ್ನು ಪರಿಶೀಲಿಸಿದಾಗ ಅದರಲ್ಲಿ ಶಿಲೆ ಕಲ್ಲುಗಳು ಪತ್ತೆಯಾಗಿದ್ದು, ಸ್ವಲ್ಪ ಮುಂದಕ್ಕೆ ಹೋದಾಗ ಕಜ್ಕೆ ಮರಕೊಂಬೆ ಎಂಬಲ್ಲಿರುವ ಕೊರೆಯಲ್ಲಿಯೂ ಕೂಡ ಸ್ಪೊಟಕ ಬಳಸಿ ಕಲ್ಲುಗಳನ್ನು ತೆಗೆದಿರುವುದು ಬೆಳಕಿಗೆ ಬಂದಿದೆ.

ಆ ಸ್ಥಳಗಳಲ್ಲಿ ಗಣಿಗಾರಿಗೆ ನಡೆಸಲು ಅನುಮತಿ ಇಲ್ಲದ ಕಾರಣ ಅಕ್ರಮ ಗಣಿಗಾರಿಕೆ ನಡೆಸಿದ ಕೃಷ್ಣ ಹಾಗೂ ಆತನೊಂದಿಗೆ ಇದ್ದ ಇನ್ನೊರ್ವ ವ್ಯಕ್ತಿ ಮತ್ತು ಕಲ್ಲು ಸಾಗಾಟ ಮಾಡಿದ ಟೆಂಪೊ ಚಾಲಕನ ವಿರುದ್ದ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

                        

                          

                        

                          

 

`

Leave a Reply

Your email address will not be published. Required fields are marked *