Share this news

ಕಾರ್ಕಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ರಿ ಕಾರ್ಕಳ ತಾಲೂಕು ಕೇಂದ್ರ ಒಕ್ಕೂಟದ ಪದಗ್ರಹಣ ಸಮಾರಂಭ ನಡೆಯಿತು.
ಶಾಸಕ ವಿ.ಸುನಿಲ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜನರು ಸ್ವಸಹಾಯ ಸಂಘಗಳಿಗೆ ಸೇರಿ ನಾವೆಲ್ಲರೂ ಕಲ್ಪಿಸಲು ಕೂಡ ಸಾಧ್ಯವಾಗದ ರೀತಿಯಲ್ಲಿ ಜನರು ಉಳಿತಾಯ ಮಾಡಿ ಆರ್ಥಿಕ ವ್ಯವಹಾರಗಳ ಮೂಲಕ ಸ್ವಾವಲಂಬಿ ಬದುಕು ನಡೆಸುತ್ತಿದ್ದಾರೆ. ಪೂಜ್ಯರ ಕಲ್ಪನೆಯಂತೆ ಪರಿಪೂರ್ಣ ಸಮಾಜ ನಿರ್ಮಾಣದತ್ತ ನಾವೆಲ್ಲರೂ ಕೂಡ ಹೆಜ್ಜೆ ಹಾಕೋಣ ಎಂದರು.

ತಾಲೂಕು ಜನಜಾಗೃತಿ ಅಧ್ಯಕ್ಷರಾದ ಉದಯಕುಮಾರ್ ಹೆಗ್ಡೆ ಮಾತನಾಡಿ, ಒಬ್ಬ ಮನುಷ್ಯ ಜನನದಿಂದ ಅವನ ಜೀವನದ ಪೂರ್ತಿ ಕರ್ಮಗಳನ್ನು ಮುಗಿಸುವಲ್ಲಿಯವರೆಗೆ ಸಹಕಾರವನ್ನು ನೀಡುವ ಸಂಸ್ಥೆ ಎಂದರೆ ಅದು ಗ್ರಾಮಾಭಿವೃದ್ಧಿ ಯೋಜನೆ ಮಾತ್ರ ಎಂದರು.
ಕಾರ್ಯಕ್ರಮದ ದಿಕ್ಸೂಚಿ ಭಾಷಣ ಮಾಡಿದ ಕರಾವಳಿ ಪ್ರಾದೇಶಿಕ ವ್ಯಾಪ್ತಿಯ ಪ್ರಾದೇಶಿಕ ನಿರ್ದೇಶಕರಾದ ದುಗ್ಗೇಗೌಡರು ಒಕ್ಕೂಟದ ಅಧ್ಯಕ್ಷರುಗಳು ಅಣ್ಣಪ್ಪ ಸ್ವಾಮಿಯ ನಂತರದಲ್ಲಿ ಸೇವೆಯನ್ನು ಕೊಡಲು ಬಂದವರು, ನಾವು ಸದಸ್ಯರುಗಳಿಗೆ ಯೋಜನೆಯ ಸವಲತ್ತುಗಳನ್ನು ಒದಗಿಸಿಕೊಟ್ಟಲ್ಲಿ ಆ ಸೇವೆ ಭಗವಂತನಿಗೆ ಸಲ್ಲುತ್ತದೆ. ಧರ್ಮಸ್ಥಳದಿಂದ ಆರಂಭವಾದ ದಾನ -ಧರ್ಮ ಇಂದು ಇಡಿ ವಿಶ್ವಕ್ಕೆ ವ್ಯಾಪಕವಾಗಿದೆ ಎಂದು ಹೇಳಿದರು.
ಕೇಂದ್ರ ಸಮಿತಿ ಅಧ್ಯಕ್ಷರಾದ ಪ್ರವೀಣ್ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನನ್ನ ವೈಯುಕ್ತಿಕ ಜೀವನಕ್ಕೆ ಧರ್ಮಸ್ಥಳ ಯೋಜನೆಯು ಮಹತ್ತರ ಬೆಳಕನ್ನು ನೀಡಿದೆ ಇದರಿಂದ ನನ್ನ ಜೀವನ ಬಂಗಾರವಾಯಿತು.ಯೋಜನೆಯ ಸಹಕಾರ ನನ್ನ ಜೇವನದ ಕೊನೆಯವರೆಗೂ ಸ್ಮರಿಸುತ್ತೇನೆ ಎಂದರು.

ಜನಜಾಗೃತಿ ಸದಸ್ಯರಾದ ಹರಿಶ್ಚಂದ್ರ ತೆಂಡೂಲ್ಕರ್, ಕಮಲಾಕ್ಷ ನಾಯಕ್, ಭಜನಾ ಪರಿಷತ್ತಿನ ಅಧ್ಯಕ್ಷರಾದ ಹರೀಶ್ ಹೆಗ್ಡೆ ಮತ್ತು ಶೌರ್ಯ ಘಟಕದ ಮಾಸ್ಟರ್ ಸದಾನಂದ ಸಾಲಿಯಾನ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಏಳು ವಲಯಗಳ ವಲಯಾಧ್ಯಕ್ಷರುಗಳು ಹಾಗೂ ನಿಕಟಪೂರ್ವ ವಲಯಾಧ್ಯಕ್ಷರುಗಳು, ತಾಲೂಕಿನ ಒಕ್ಕೂಟದ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು, ಯೋಜನೆಯ ಕಾರ್ಯಕರ್ತರು ಹಾಗೂ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪೂಜ್ಯರು ಮಂಜೂರು ಮಾಡಿರುವ ಅನುದಾನಗಳು ಹಾಗೂ ವೀಲ್ ಚೇರ್ ಮತ್ತು ಮರಣ ಹೊಂದಿದ ಸದಸ್ಯರ ಹಾಗೂ ವಿನಿಯೋಗದಾರರ ಪ್ರಗತಿ ರಕ್ಷಾ ಕವಚದ ಮಂಜುರಾತಿ ಪತ್ರವನ್ನು ವಿತರಿಸಲಾಯಿತು.
ಯೋಜನೆಯ ತಾಲೂಕು ಯೋಜನಾಧಿಕಾರಿಯವರಾದ ಶ್ರೀಮತಿ ಹೇಮಲತಾ ಸ್ವಾಗತಿಸಿ, ಪ್ರಸ್ತಾವನೆಗೈದರು.ಕಾರ್ಕಳ ವಲಯದ ಮೇಲ್ವಿಚಾರಕಿ ಶ್ರೀಮತಿ ಗೀತಾ ವಂದಿಸಿ, ಹೊಸ್ಮಾರು ವಲಯದ ಮೇಲ್ವಿಚಾರಕ ಮನೋಜ್ ಹೆಗ್ಡೆ ಕಾರ್ಯಕ್ರಮವನ್ನು ನಿರೂಪಿಸಿದರು.

 

                        

                          

                        

                       

Leave a Reply

Your email address will not be published. Required fields are marked *