ಕಾರ್ಕಳ : ಕಾರ್ಕಳ ಜ್ಞಾನಸುಧಾ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ 2024-25ನೇ ಸಾಲಿನ ವಿದ್ಯಾರ್ಥಿ ಸಂಸತ್ ಉದ್ಘಾಟಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಿ.ಇ.ಒ ಹಾಗೂ ಪ್ರಾಂಶುಪಾಲ ದಿನೇಶ್.ಎಂ. ಕೊಡವೂರ್ ವಹಿಸಿದ್ದರು. ಉಪಪ್ರಾಂಶುಪಾಲೆ ಶ್ರೀಮತಿ ವಾಣಿ ಕೆ. ಪ್ರತಿಜ್ಞಾವಿಧಿ ಬೋಧಿಸಿದರು.
ಮುಖ್ಯ ಅತಿಥಿಯಾಗಿದ್ದ ಕಾರ್ಕಳ ಜ್ಞಾನಸುಧಾ ಪ.ಪೂ.ಕಾಲೇಜಿನ ಆಂಗ್ಲಭಾಷಾ ವಿಭಾಗದ ಮುಖ್ಯಸ್ಥೆ ಶ್ರೀಮತಿ ಸಂಗೀತಾ ಕುಲಾಲ್ ಶಾಲಾಸಂಸತ್ತಿನ ಪದಾಧಿಕಾರಿಗಳಿಗೆ ಪದನಾಮದ ಪದಕ ತೊಡಿಸಿ ವಿವಿಧ ನಾಯಕರ ಉದಾಹರಣೆಯ ಮೂಲಕ ಪ್ರಜಾಪ್ರಭುತ್ವದಲ್ಲಿ ನಾಯಕತ್ವದ ಮಹತ್ವದ ಕುರಿತಂತೆ ಮಾತನಾಡಿದರು.
ಈ ಸಂದರ್ಭ ಪಿ.ಆರ್.ಒ ಜ್ಯೋತಿಪದ್ಮನಾಭ ಭಂಡಿ, ಪ್ರೌಢಶಾಲಾ ಅಕಾಡೆಮಿಕ್ ಅಡ್ವೆöÊಸರ್ ಶ್ರೀಮತಿ ಶಾರದಾ ಅಂಬರೀಶ್, ದೈಹಿಕ ಶಿಕ್ಷಕಿ ರೇಷ್ಮಾ ಸಾಲೀಸ್ ವಿದ್ಯಾರ್ಥಿ ನಾಯಕ ದೈವಿಕ್ ಶೆಟ್ಟಿ. ಉಪನಾಯಕಿ ಆಶ್ನಿ ಕೋಟ್ಯಾನ್ ಹಾಗೂ ವಿವಿಧ ವಿಭಾಗಗಳ ಸಚಿವರು, ಉಪಸಚಿವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗಣಿತ ಶಿಕ್ಷಕಿ ಆಜ್ಞಾ ಸೋಹಂ ಕಾರ್ಯಕ್ರಮ ನಿರೂಪಿಸಿ ವಂದಿಸಿದರು, ವಿದ್ಯಾರ್ಥಿನಿ ವೈಷ್ಣವೀ ಶೆಟ್ಟಿಗಾರ್ ಪ್ರಾರ್ಥಿಸಿದರು.
