ಕಾರ್ಕಳ, ಅ 07: ಸಮಾಜದ ಎಲ್ಲಾ ಸಮುದಾಯಗಳ ಜೊತೆ ಅತ್ಯಂತ ಅನ್ಯೋನ್ಯತೆಯಿಂದ ಗುರುತಿಸಿಕೊಂಡ ಸಮಾಜ ಇದ್ದರೆ ಅದು ಸವಿತಾ ಸಮಾಜ. ಪ್ರಮಾಣಿಕ ದುಡಿಮೆಯಿಂದ ಸಮಾನ ಮನಸ್ಕ ಸವಿತಾ ಸಮಾಜದ ಬಂಧುಗಳು ಒಗ್ಗೂಡಿ ಕಟ್ಟಿದ ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘವು ಇಂದು ಉಡುಪಿ ಜಿಲ್ಲೆಯಲ್ಲಿ ಹೆಮ್ಮರವಾಗಿ ಬೆಳೆದಿದ್ದು ಪ್ರಸ್ತುತ 6 ಶಾಖೆಗಳನ್ನು ತೆರೆದಿರುವುದು ಶ್ಲಾಘನೀಯ, ಇಂತಹ ನೂರಾರು ಶಾಖೆಗಳು ರಾಜ್ಯದೆಲ್ಲೆಡೆ ತೆರೆಯುವಂತಾಗಲಿ ಎಂದು ಕಾರ್ಕಳ ಪುರಸಭಾ ಅಧ್ಯಕ್ಷ ಯೋಗೀಶ್ ದೇವಾಡಿಗ ಶುಭ ಹಾರೈಸಿದರು.
ಅವರು ಕಾರ್ಕಳ ಮಾರಿಯಮ್ಮ ದೇವಸ್ಥಾನದ ಸಮೀಪದ ಪ್ರೆöÊಮ್ ಸಿಟಿ ಸೆಂಟರಿನ ಮೊದಲನೇ ಮಹಡಿಯಲ್ಲಿ ಸವಿತಾ ಸಮಾಜ ವಿವಿಧೋದ್ಧೇಶ ಸೌಹಾರ್ದ ಸಹಕಾರಿ ಸಂಘದ ನೂತನ ಸ್ವಂತ ಕಚೇರಿ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿ ಬೆಂಗಳೂರು ಇದರ ನಿರ್ದೇಶಕ ಮಂಜುನಾಥ್ ಎಸ್.ಕೆ ಮಾತನಾಡಿ, ಸವಿತಾ ಸಮಾಜ ವಿವಿಧೋದ್ಧೇಶ ಸಹಕಾರಿ ಸಂಘವು ಪ್ರಸ್ತುತ 20 ಕೋಟಿಗೂ ಮಿಕ್ಕಿ ಠೇವಣಿ ಹೊಂದಿದ್ದು ಉಡುಪಿ ಜಿಲ್ಲೆಯಲ್ಲಿ 5 ಶಾಖೆಗಳನ್ನು ಹೊಂದಿದ್ದು ಸುಮಾರು 1 ಸಾವಿರಕ್ಕೂ ಮಿಕ್ಕಿ ಸದಸ್ಯರನ್ನು ಹೊಂದಿದೆ ಮಾತ್ರವಲ್ಲದೇ ಕಾರ್ಕಳದಲ್ಲಿ ಕಚೇರಿಯ ಸ್ವಂತ ಕಟ್ಟಡ ಇಂದು ಲೋಕಾರ್ಪಣೆಯಾಗಿರುವುದು ಶ್ಲಾಘನೀಯ ಎಂದರು. ಸಹಕಾರಿ ಸಂಘದ ಜೊತೆಜೊತೆಗೆ ಸವಿತಾ ಸಮಾಜದ ಸೆಲೂನ್ ಮಳಿಗೆಯನ್ನು ಸ್ಥಾಪಿಸಿರುವುದು ಅತ್ಯುತ್ತಮ ಬೆಳವಣಿಗೆ, ಯಾಕೆಂದರೆ ಈ ಮಳಿಗೆಗಳಿಂದ ಖರೀದಿಸಿ ಬಂದ ಲಾಭವು ನೇರವಾಗಿ ಸವಿತಾ ಸಮಾಜಕ್ಕೆ ಸಿಗುತ್ತದೆ, ಇದರಿಂದ ಸಮುದಾಯವು ಬೆಳೆಯಲು ಸಾಧ್ಯ. ನಮ್ಮ ಮನೆಯನ್ನು ಎಷ್ಟು ಜವಾಬ್ದಾರಿಯಿಂದ ನಿರ್ವಹಿಸುತೇವೆಯೋ ಅಷ್ಟೇ ಹೊಣೆಗಾರಿಕೆ ಸವಿತಾ ಸಮಾಜದ ಸಹಕಾರಿ ಸಂಘವನ್ನು ಬೆಳೆಸಬೇಕು. ಸಮುದಾಯಗಳು ಆರ್ಥಿಕವಾಗಿ ಶೈಕ್ಷಣಿಕವಾಗಿ ಬಲಿಷ್ಟವಾದಾಗ ಇಡೀ ಸಮಾಜವು ಸದೃಢವಾಗುತ್ತದೆ ಎಂದರು.
ದ.ಕ ಹಾಗೂ ಉಡುಪಿ ಜಿಲ್ಲಾ ಸೌಹಾರ್ದ ಅಭಿವೃದ್ಧಿ ಅಧಿಕಾರಿ ವಿಜಯ್ .ಬಿ.ಎಸ್ ಮಾತನಾಡಿ,2007 ರಲ್ಲಿ ಆರಂಭಗೊAಡ ಸವಿತಾ ಸಮಾಜ ವಿವಿಧೋದ್ದೇಶ ಸಹಕಾರಿ ಸಂಘ ಇಂದು ಉಡುಪಿ 5 ಶಾಖೆಗಳನ್ನು ತೆರೆದ್ದಿದ್ದು ಶ್ಲಾಘನೀಯ. ರಾಜ್ಯದಲ್ಲಿ 6 ಸಾವಿರ ಸೌಹಾರ್ದ ಸಹಕಾರಿ ಸಂಘಗಳು ಇದ್ದರೂ ಸವಿತಾ ಸಮಾಜದ ವಿವಿಧೋದ್ದೇಶ ಸಹಕಾರಿ ಸಂಘವು ಅತ್ಯಲ್ಪ ಅವಧಿಯಲ್ಲಿ ಸ್ವಂತ ಕಟ್ಟಡ ಹೊಂದಿರುವುದು ಸಂಘದ ಕಾರ್ಯವೈಖರಿಗೆ ಸಾಕ್ಷಿಯಾಗಿದೆ ಎಂದರು.
ಪ್ರೆöÊಮ್ ಸಿಟಿ ಸೆಂಟರ್ ಮಾಲಕ ಮಹಾವೀರ ಹೆಗ್ಡೆ ಮುಖ್ಯ ಅತಿಥಿಯಾಗಿ ಮಾತನಾಡಿ, ಸವಿತಾ ಮಹರ್ಷಿ ಆದರ್ಶಗಳು ಸಮಾಜಕ್ಕೆ ಮಾದರಿಯಾಗಿದೆ. ಸವಿತಾ ಸಮಾಜವು ಒಂದು ಕಾಲದಲ್ಲಿ ತುಳಿತಕ್ಕೆ ಒಳಗಾಗಿದ್ದರೂ,ಪ್ರಾಮಾಣಿಕ ದುಡಿಮೆಯಿಂದ ಇಂದು ಸವಿತಾ ಸಮಾಜ ಮುಂಚೂಣಿಯಲ್ಲಿದೆ.ಸವಿತಾ ಸಮಾಜದಕ್ಕೆ ನಾವೆಲ್ಲರೂ ಋಣಿಯಾಗಿರಬೇಕು. ಸವಿತಾ ಸಮಾಜದ ಯುವಕ ಯುವತಿಯರಿಗೆ ಉದ್ಯೋಗ ಕಲ್ಪಿಸುವ ಹಾಗೂ ಸಮಾಜವನ್ನು ಸಶಕ್ತರನ್ನಾಗಿಸುವ ನಿಟ್ಟಿನಲ್ಲಿ ಕಟ್ಟಿದ ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘವು ಇಂದು ಉಡುಪಿ ಜಿಲ್ಲೆಯಲ್ಲಿ ಗಟ್ಟಿಯಾಗಿ ನೆಲೆಯೂರಿದೆ ಎಂದರು.
ಉದಯ ಕೃಷ್ಯಯ್ಯ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮುನಿಯಾಲು ಉದಯ ಶೆಟ್ಟಿ ಮಾತನಾಡಿ, 18 ವರ್ಷಗಳ ಹಿಂದೆ ಸ್ಥಾಪಿಸಿರುವ ಸವಿತಾ ಸಮಾಜ ವಿವಿಧೋದ್ಧೇಶ ಸಹಕಾರಿ ಸಂಘವು ಇಂದು ಪ್ರಸ್ತುತ 8 ಕೋಟಿ ವಹಿವಾಟು ಹಾಗೂ 20 ಕೋಟಿ ಮಿಕ್ಕಿ ಠೇವಣಿ ಹೊಂದಿದೆ ಎಂದರೆ ನಿಜಕ್ಕೂ ಶ್ಲಾಘನೀಯ ಎಂದರು. ಇನ್ನಷ್ಟು ಶಾಖೆಗಳು ತೆರೆಯುವಂತಾಗಲಿ. ಸಹಕಾರಿ ಸಂಘಗಳು ಬಡವರನ್ನು ಸಶಕ್ತರನ್ನಾಗಿಸಲು ಸಾಧ್ಯ. ರಾಜಕೀಯದಲ್ಲಿ ತನ್ನ ಹೆಸರನ್ನು ಚಿರಸ್ಥಾಯಿಯನ್ನಾಗಿಸಿದ ವ್ಯಕ್ತಿ ಎಂದರೆ ಮಾಜಿ ಶಾಸಕ ಗೋಪಾಲ ಭಂಡಾರಿ. ಸವಿತಾ ಸಮಾಜದ ಪ್ರತಿನಿಧಿಯಾಗಿದ್ದ ಗೋಪಾಲ ಭಂಡಾರಿಯವರು ನಮ್ಮ ನಾಯಕರಾಗಿದ್ದರು ಎನ್ನುವುದು ಹೆಮ್ಮೆಯ ವಿಚಾರ. ಸವಿತಾ ಸಮಾಜವು ಇತರ ಸಮುದಾಯಗಳಂತೆ ಇಂದು ಸಮಾಜದ ಎಲ್ಲಾ ರಂಗಗಳಲ್ಲಿ ಮುಂದುವರಿದ್ದು ಶ್ಲಾಘನೀಯ ಎಂದರು. ಸಮಾಜಮುಖಿ ಕೆಲಸಗಳನ್ನು ಮಾಡುವ ಸಂದರ್ಭದಲ್ಲಿ ಟೀಕೆ ಟಿಪ್ಪಣಿಗಳು ಸಹಜ, ಅವೆಲ್ಲವನ್ನೂ ಬದಿಗಿರಿಸಿ ಹಿಡಿದ ಕಾರ್ಯ ಮುಂದುವರಿಸಿದಾಗ ಯಶಸ್ಸು ಸಾಧ್ಯ ಎಂದರು.
ಸವಿತಾ ಸಮಾಜ ವಿವಿಧೋದ್ಧೇಶ ಸಂಘದ ಅಧ್ಯಕ್ಷರಾದ ನವೀನ್‌ಚಂದ್ರ ಭಂಡಾರಿ ಸಭಾ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿ, ಸವಿತಾ ಸಮುದಾಯದವರ ಆರ್ಥಿಕ ಸ್ಥಿತಿಗತಿ ಉತ್ತಮವಾಗಬೇಕೆನ್ನುವ ನಿಟ್ಟಿನಲ್ಲಿ 2007ರಲ್ಲಿ ಸಹಕಾರಿ ಸಂಘ ಸ್ಥಾಪಿಸಲಾಯಿತು. 18 ವರ್ಷಗಳ ಪ್ರಯಾಣದಲ್ಲಿ ಇಂದು 5 ಶಾಖೆಗಳು ಹಾಗೂ ಟಿಶ್ಯು ಉತ್ಪಾದನಾ ಘಟಕ ಕಂಪೆನಿ ಸ್ಥಾಪಿಸಲಾಗಿದೆ. ನಮ್ಮ ಸಹಕಾರಿ ನಮ್ಮ ಬದುಕು ಯೋಜನೆಯಡಿ ಹೊಸದಾಗಿ ಸೆಲೂನ್ ಅಂಗಡಿ ತರೆಯಲು ಶೂನ್ಯ ಬಡ್ಡಿದರದಲ್ಲಿ ಸಾಲ, ನಮ್ಮ ಸಹಕಾರಿ ನಮ್ಮ ಮನೆ ಯೋಜನೆಯಡಿ ಸಂಘದ ಸದಸ್ಯರಿಗೆ 7.50% ಬಡ್ಡಿದರದಲ್ಲಿ ಗೃಹಸಾಲ ಯೋಜನೆ, ನಮ್ಮ ಸಹಕಾರಿ ನಮ್ಮ ವಾಹನ ಯೋಜನೆಯಡಿ 8.50% ಬಡ್ಡಿದರದಲ್ಲಿ ವಾಹನ ಸಾಲ ಹಾಗೂ ನಮ್ಮ ಸಹಕಾರಿ ನಮ್ಮ ಶಿಕ್ಷಣ ಯೋಜನೆಯಡಿ 9% ಬಡ್ಡಿದರದಲ್ಲಿ ಶಿಕ್ಷಣ ಸಾಲ ನೀಡುವ ಗುರಿ ಹೊಂದಲಾಗಿದೆ. ತೆರೆಯುವ ಉದ್ದೇಶ ಹೊಂದಲಾಗಿದೆ.ಇದಲ್ಲದೇ ನಿವೃತ್ತರಾದ ಕ್ಷೌರಿಕರಿಗೆ ಪಿಂಚಣಿ ಯೋಜನೆಯನ್ನು ಆರಂಭಿಸಲಾಗುವುದು ಎಂದರು.
ಸವಿತಾ ಸಮಾಜವು ಕೇವಲ ಸಹಕಾರಿ ಕ್ಷೇತ್ರ ಮಾತ್ರವಲ್ಲದೇ ಉದ್ಯಮ ಕ್ಷೇತ್ರಕ್ಕೂ ಹೆಜ್ಜೆಯಿಡಲು ಚಿಂತನೆ ನಡೆಸಲಾಗಿದೆ. ಕಸದಿಂದ ರಸ ಎಂಬAತೆ ಕೂದಲುಗಳನ್ನು ಸಂಸ್ಕರಿಸಿ ಅಮೈನೋ ಆಸಿಡ್ ಉತ್ಪಾದಿಸುವ ಘಟಕ ಆರಂಭಿಸಲಾಗುವುದು. ಆದ್ದರಿಂದ ಸವಿತಾ ಸಮಾಜದ ಬಂಧುಗಳು ಕೂದಲನ್ನು ಸಂಸ್ಕರಣಾ ಘಟಕಗಳಿಗೆ ನೀಡಬಹುದಾಗಿ ಎಂದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ನವೀನ್‌ಚಂದ್ರ ಭಂಡಾರಿ ದಂಪತಿಯನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ವಿಶ್ವನಾಥ ಭಂಡಾರಿ,ಸವಿತಾ ಸಮಾಜ ವಿವಿಧೋದ್ಧೇಶ ಸೌಹಾರ್ದ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾಲತಿ ಅಶೋಕ್ ಭಂಡಾರಿ, ಕಾರ್ಕಳ ಶಾಖಾ ವ್ಯವಸ್ಥಾಪಕಿ ಮಾಲಿನಿ ಪ್ರಸನ್ನ ಭಂಡಾರಿಯವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಭಂಡಾರಿ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಶೇಖರ ಭಂಡಾರಿ, ಉಡುಪಿ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ರಾಜು,ಸಿ ಭಂಡಾರಿ, ಕಾರ್ಕಳ ತಾಲೂಕು ಸವಿತಾ ಸಮಾಜದ ಅಧ್ಯಕ್ಷ ಹಾಗೂ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕ ನಾಗೇಶ್ ಭಂಡಾರಿ, ಸದಾಶಿವ ಬಂಗೇರ ಕುಕಾಲು, ವಿಶ್ವನಾಥ ಭಂಡಾರಿ, ನಿಂಜೂರು, ಶೇಖರ ಸಾಲನ್ಯಾನ್ ಆದಿ ಉಡುಪಿ, ಸತೀಶ್ ಭಂಡಾರಿ ಕಾಪು, ಸುಮನ ಕೃಷ್ಣ ಭಂಡಾರಿ ಕಾರ್ಕಳ, ಶಿವಾನಂದ ಸಾಲ್ಯಾನ್ ಬೆಳ್ಮಣ್, ನವೀನ್ ಭಂಡಾರಿ ಬಸ್ರೂರು, ಚಂದ್ರಶೇಖರ ಭಂಡಾರಿ ಹುಣ್ಸೆಮಕ್ಕಿ,ಗೋಪಾಲ ಮಲ್ಯ ಬೈಂದೂರು, ಶ್ರೀಲತಾ ನರೇಂದ್ರ ಸಾಲ್ಯಾನ್ ಕಾಪು, ಮಂಜುನಾಥ ಭಂಡಾರಿ ಪಡುಕೆರೆ, ದಿನೇಶ ಭಂಡಾರಿ ಕೊಕ್ಕರ್ಣೆ,ಪ್ರವೀಣ್ ಭಂಡಾರಿ ಬೆಳ್ಮಣ್ ಮುಂತಾದವರು ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಸವಿತಾ ಸಮಾಜದ ರಾಜ್ಯ ಪ್ರತಿನಿಧಿ ಬನ್ನಂಜೆ ಗೋವಿಂದ ಭಂಡಾರಿ ಪ್ರಸ್ತಾವಿಕವಾಗಿ ಮಾತನಾಡಿದರು.
ಪ್ರಶಾಂತ್ ಸಾಲ್ಯಾನ್ ನಲ್ಲೂರು ಸ್ವಾಗತಿಸಿ, ರೇಶ್ಮಾ ಸುದರ್ಶನ್ ಭಂಡಾರಿ ವಂದಿಸಿದರು. ಮಂಜುನಾಥ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.