ಕಾರ್ಕಳ: ಮಾಳ ಕೂಡಬೆಟ್ಟು ಪಿ ಎಂ ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮ ಎಸ್ ಡಿ ಎಂ ಸಿ ಅಧ್ಯಕ್ಷರಾದ ಕೆ ಶಶಿಧರ್ ಭಟ್ ನೆರವೇರಿಸಿದರು. ಎಸ್ ಡಿ ಎಂ ಸಿ ಅಧ್ಯಕ್ಷರು,ಗ್ರಾಮ ಪಂಚಾಯತ್ ಸದಸ್ಯರಾದ ಸಂಜೀವ, ಅನಿಲ್ ಎಸ್ ಪೂಜಾರಿ,ಶಾಲೆಯ ಪ್ರಾಕ್ತನ ವಿದ್ಯಾರ್ಥಿ ಸೂರಜ್ ಜೋಶಿ ಮಕ್ಕಳಿಂದ ಗೌರವ ವಂದನೆ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಶಾಂತಿ ಶೆಟ್ಟಿ, ಸುಂದರಿ , ಸಂಜೀವ, ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಕೃಷ್ಣ ಮೊಯ್ಲಿ, ಉದ್ಯಮಿ ಪ್ರಶಾಂತ ಪ್ರಭು,ಮಾಳ ಕೆರ್ವಾಶೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಅನಿಲ್ ಎಸ್ ಪೂಜಾರಿ, ಸೂರಜ್ ಜೋಶಿ,ಅಂಗನವಾಡಿ ಕಾರ್ಯಕರ್ತೆಯರು ಹಿರಿಯ ವಿದ್ಯಾರ್ಥಿಗಳು ಮಕ್ಕಳು ಪಾಲಕರು ಹಾಜರಿದ್ದರು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಲೆಯಿಂದ ವರ್ಗವಾಗಿ ಉಡುಪಿ ವಲಯದ ಒಳಕಾಡು ಶಾಲೆಗೆ ಸೇರ್ಪಡೆಗೊಂಡ ಆಂಗ್ಲ ಭಾಷಾ ಶಿಕ್ಷಕಿ ಶ್ರೀಮತಿ ಸ್ಟೇಫಿ ಶೈನಿ ಫೆರ್ನಾಂಡಿಸ್ ಅವರನ್ನು ಗೌರವಿಸಲಾಯಿತು. ಅನಿಲ್ ಎಸ್ ಪೂಜಾರಿ ಶ್ರೀ ಕೃಷ್ಣ ಮೊಯ್ಲಿ, ಶಶಿಧರ ಭಟ್, ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಶ್ರೀಮತಿ ವಿಜಯ ಬಾಲಕೃಷ್ಣ ಹೆಗಡೆ, ಸ್ಟೇಫಿ ದಂಪತಿಗಳು, ಸೂರಜ್ ಜೋಶಿ, ಶಾಲೆಯ ಅಕ್ಷರ ದಾಸೋಹ ಸಿಬ್ಬಂದಿಗಳು, ಮಕ್ಕಳ ಪಾಲಕರು,ಮಕ್ಕಳು ಶಿಕ್ಷಕ ವೃಂದದವರು ಹಾಜರಿದ್ದರು.
ಫಲ,ಪುಷ್ಪ, ಮಾನ ಪತ್ರ,ಸ್ಮರಣಿಕೆ ನೀಡಿ ಸ್ಟೇಫಿ ದಂಪತಿಗಳನ್ನು ಅಭಿನಂದಿಸಲಾಯಿತು. ಶಾಲೆಯ ಶಿಕ್ಷಕಿ ಶ್ರೀಮತಿ ಹೇಮಾ, ಮಾನಪತ್ರವನ್ನು ಓದಿದರು. ಸಹೋದ್ಯೋಗಿಗಳಾದ ಹಿರಿಯ ಶಿಕ್ಷಕಿ ಶ್ರೀಮತಿ ಅರುಣಾ ,ಶ್ರೀಮತಿ ಹರಿಣಿ, ಶ್ರೀಮತಿ ಮಮತಾ ಜೋಶಿ, ಬೀಳ್ಕೊಂಡು ಹೋಗುತ್ತಿರುವ ಶಿಕ್ಷಕರ ಜೊತೆಗಿನ ಒಡನಾಟವನ್ನು ಹಂಚಿಕೊಂಡು ಶುಭ ಹಾರೈಸಿದರು.
ಕಳೆದ ಶೈಕ್ಷಣಿಕ ವರ್ಷದಲ್ಲಿ ಕಲಿಯುವಿಕೆಯಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ಶ್ರೀಮತಿ ಮತ್ತು ಶ್ರೀ ಗೋಪಾಲ ಸೇರಿಗಾರ್ ಮತ್ತು ಮಕ್ಕಳು ನೀಡುವ ನಗದು ರೂಪದ ಬಹುಮಾನವನ್ನು ವಿತರಿಸಲಾಯಿತು. ಶಿಕ್ಷಕಿ ಶ್ರೀಮತಿ ಸ್ಟೇಫಿ ಅವರೊಂದಿಗಿನ ಒಡನಾಟವನ್ನು ಶಾಲೆಯ ಹಿರಿಯ ವಿದ್ಯಾರ್ಥಿನಿ ಕುಮಾರಿ ಸಾಹಿತ್ಯ ಹಂಚಿಕೊಂಡಳು.ಪ್ರಾಕ್ತನ ವಿದ್ಯಾರ್ಥಿಗಳು ನೆನಪಿನ ಕಾಣಿಕೆ ನೀಡಿದರು.
ಶಾಲಾ ಮಕ್ಕಳು ಪ್ರಾರ್ಥಿಸಿದರು. ಶಾಲೆಯ ಹಿರಿಯ ಶಿಕ್ಷಕ ಶ್ರೀ ರಾಧಾಕೃಷ್ಣ ಜೋಶಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಪ್ರಭಾವತಿ ಎಲ್ಲರನ್ನೂ ಸ್ವಾಗತಿಸಿದರು. ಶಾಲೆಯ ಶಿಕ್ಷಕ ವೃಂದ ಮತ್ತು ಮಕ್ಕಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.



























`
