Share this news

ಇಸ್ಲಮಾಬಾದ್: ಭಾರತ ಸೂಪರ್ ಪವರ್‌ ಆಗಲು ಕನಸು ಕಾಣುತ್ತಿರುವ ಹೊತ್ತಲ್ಲಿ ಪಾಕಿಸ್ತಾನವು ದಿವಾಳಿತನದಿಂದ ತಪ್ಪಿಸಿಕೊಳ್ಳಲು ಭಿಕ್ಷೆ ಬೇಡುತ್ತಿದೆ ಎಂದು ಪಾಕಿಸ್ತಾನದ ಪ್ರಮುಖ ಬಲಪಂಥೀಯ ಇಸ್ಲಾಮಿಕ್ ನಾಯಕ ಮೌಲಾನಾ ಫಜ್ಲುರ್ ರೆಹಮಾನ್ ಬೇಸರ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮಾತನಾಡಿದ ಅವರು, ಭಾರತ ಮತ್ತು ನಮ್ಮನ್ನು ಹೋಲಿಸಿ ನೋಡಿ. ಎರಡೂ ದೇಶಗಳಿಗೆ ಸ್ವಾತಂತ್ರ್ಯ ಸಿಕ್ಕಿದ್ದು ಒಂದೇ ದಿನ. ಆದರೆ ಇಂದು ಭಾರತ ಸೂಪರ್‌ ಪವರ್‌ ಆಗುವ ಕನಸು ಕಾಣುತ್ತಿದೆ. ನಾವು ದಿವಾಳಿತನವನ್ನು ತಪ್ಪಿಸಲು ಭಿಕ್ಷೆ ಬೇಡುತ್ತಿದ್ದೇವೆ ಎಂದಿದ್ದಾರೆ.

ನಿರ್ಧಾರಗಳನ್ನು ಬೇರೆಯವರು ಮಾಡುತ್ತಾರೆ. ಆದರೆ ಸಮಸ್ಯೆಗಳಿಗೆ ರಾಜಕಾರಣಿಗಳೇ ಕಾರಣ. ನಾವು ಇಸ್ಲಾಂ ಹೆಸರಿನಲ್ಲಿ ದೇಶವನ್ನು ಪಡೆದುಕೊಂಡಿದ್ದೇವೆ. 1973ರಿಂದ ಸಿಐಐನ ಒಂದೇ ಒಂದು ಶಿಫಾರಸನ್ನೂ ಜಾರಿಗೆ ತಂದಿಲ್ಲ. ನಾವು ಇಸ್ಲಾಮಿಕ್ ದೇಶವಾಗುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ. ದಿವಾಳಿತನ ತಪ್ಪಿಸಲು ಪಾಕಿಸ್ತಾನವು ಅಂತಾರಾಷ್ಟ್ರೀಯ ಹಣಕಾಸು ನಿಧಿ ಬಳಿ ಭಿಕ್ಷೆ ಬೇಡುತ್ತಿದೆ ಎಂದು ರೆಹಮಾನ್‌ ಬೇಸರಿಸಿದ್ದಾರೆ

 

 

 

                        

                          

Leave a Reply

Your email address will not be published. Required fields are marked *