ನವದೆಹಲಿ: ಮುಂಬರುವ 2025ರ ಟಿ 20 ಪುರುಷರ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಗೆ ಭಾರತ ಆತಿಥ್ಯ ವಹಿಸಲಿದೆ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ತಿಳಿಸಿದೆ.
2023 ರ ಪುರುಷರ ಏಷ್ಯಾ ಕಪ್ ಅನ್ನು ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಜಂಟಿಯಾಗಿ ಆಯೋಜಿಸಲಾಗಿತ್ತು ಮತ್ತು ಇದು 50 ಓವರ್‌ಗಳ ಪಂದ್ಯಾವಳಿಯಾಗಿತ್ತು.
2027ರ ಏಷ್ಯಾ ಕಪ್’ನ ಆವೃತ್ತಿಯು ಏಕದಿನ ಸ್ವರೂಪಕ್ಕೆ ಬದಲಾಗಲಿದ್ದು, ಬಾಂಗ್ಲಾದೇಶ ಆತಿಥ್ಯ ವಹಿಸಲಿದೆ. ಎರಡೂ ಪಂದ್ಯಾವಳಿಗಳು ಆರು ತಂಡಗಳನ್ನು ಒಳಗೊಂಡಿರುತ್ತವೆ
ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಅರ್ಹತಾ ಸ್ಪರ್ಧೆಯ ಮೂಲಕ ನಿರ್ಧರಿಸಲಾದ ಆರನೇ ತಂಡ ಮತ್ತು ಪ್ರತೀ ಆವೃತ್ತಿಗೆ 13 ಪಂದ್ಯಗಳನ್ನು ಒಳಗೊಂಡಿರುತ್ತದೆ.
ಮಹಿಳಾ ಏಷ್ಯಾ ಕಪ್ ಮುಂದಿನ ಆವೃತ್ತಿ (15 ಪಂದ್ಯಗಳು) ಟಿ 20 ಸ್ವರೂಪದಲ್ಲಿ ನಡೆಯಲಿದೆ ಮತ್ತು 2026 ರಲ್ಲಿ ನಿಗದಿಯಾಗಿದೆ.
`