
ಕಾರ್ಕಳ,ಫೆ.13 : ಇಂಟಾರಾಕ್ಟ್ಕ್ಲಬ್ ವತಿಯಿಂದ ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆ ಮತ್ತು ಪ್ರೌಢಶಾಲೆಯಲ್ಲಿ ದಂತ ಆರೋಗ್ಯ ಮತ್ತು ಆರೈಕೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿಕಾರ್ಯಕ್ರಮವು ಫೆ.13ರಂದು ನಡೆಯಿತು. ಆರೋಗ್ಯಕರಜೀವನಕ್ಕೆ ಹಲ್ಲುಗಳ ಆರೋಗ್ಯವೂ ಮುಖ್ಯ. ಆದುದರಿಂದ ಮೌಖಿಕ ನೈರ್ಮಲ್ಯ, ಹಲ್ಲುಉಜ್ಜುವ ವಿಧಾನ, ಹಲ್ಲುಗಳು ಮತ್ತು ವಸಡುಗಳ ಆರೋಗ್ಯತಪಾಸಣೆಯ ಬಗ್ಗೆಓರಲ್ಆಂಡ್ ಮ್ಯಾಕ್ಸಿಲೋಫೆಶಿಯಲ್ ರೇಡಿಯೋಲಾಜಿಸ್ಟ್ ಹಾಗೂ ಜೋಡುರಸ್ತೆಯ ಶಾನ್ಡೆಂಟಲ್ಕ್ಲಿನಿಕ್ನದAತ ವೈದ್ಯೆಡಾ. ಶಾಂತಲಾ ಇವರು ಪ್ರಾತ್ಯಕ್ಷಿಕೆಯ ಮೂಲಕ ಮಾಹಿತಿ ನೀಡಿದರು.
ಕಾರ್ಕಳ ಜ್ಞಾನಸುಧಾಆಂಗ್ಲ ಮಾಧ್ಯಮ ಶಾಲೆ ಮತ್ತು ಪ್ರೌಢಶಾಲೆಯ ಉಪ ಪ್ರಾಂಶುಪಾಲರಾದ ವಾಣಿ ಕೆ., ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಾರ್ವಜನಿಕ ಸಂಪರ್ಕಧಿಕಾರಿಯಾಗಿರುವ ಜ್ಯೋತಿ ಪದ್ಮನಾಭ ಭಂಡಿ, ಇಂಟರಾಕ್ಟ್ಕ್ಲಬ್ ನ ಸಂಯೋಜಕಿ ದಿವ್ಯಾ ಉಪಸ್ಥಿತರಿದ್ದರು ಸಹ ಶಿಕ್ಷಕಿ ಸುಪ್ರಿಯಾ ಕಾರ್ಯಕ್ರಮ ನಿರೂಪಿಸಿದರು.

.
.
.
.
.
.
.
.
.
.
