
ಕಾರ್ಕಳ: ತಾಲೂಕಿನ ಇರ್ವತ್ತೂರು ಗ್ರಾಮದಲ್ಲಿ ಮದ್ಯವ್ಯಸನಿ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇರ್ವತ್ತೂರಿನ ಮಹೇಶ್ ಶೆಟ್ಟಿ(37ವ) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ಮಹೇಶ್ ಶೆಟ್ಟಿ ಅವರ ಕುಡಿತದ ಚಟದಿಂದ ಬೇಸತ್ತ ಅವರ ಪತ್ನಿ ಕಳೆದ 3 ವರ್ಷಗಳ ಹಿಂದೆ ವಿಚ್ಛೇದನ ನೀಡಿದ್ದರು.ಪತ್ನಿ ಬಿಟ್ಟು ಹೋದ ಕಾರಣ ಬೇಸತ್ತಿದ್ದ ಮಹೇಶ್ ಶೆಟ್ಟಿ ಅವರು ಸರಿಯಾಗಿ ಕೆಲಸಕ್ಕೂ ಹೋಗದೆ ಮನೆಯಲ್ಲಿಯೇ ಇದ್ದರು. ಇದೇ ಕಾರಣಕ್ಕೆ ಮನನೊಂದು ಅ.29 ರಂದು ರಾತ್ರಿ ಮನೆಯ ಸಮೀಪದ ಹಲಸಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




