Share this news

ಕಾರ್ಕಳ: ವ್ಯಕ್ತಿತ್ವ ವಿಕಸನಕ್ಕೆ ತರಬೇತಿಗಳ ಸಪ್ತಾಹದ ಹೂರಣ ಇದರ ಅಂಗವಾಗಿ ಆಹಾರ -ವಿಹಾರ-ಆಚಾರ-ವಿಚಾರಗಳ ಮೂಲಕ ವ್ಯಕ್ತಿತ್ವ ನಿರ್ಮಾಣ ಮತ್ತು ಚಟುವಟಿಕೆಗಳ ಮೂಲಕ ನಾಯಕತ್ವ ಕೌಶಲ್ಯ ವಿಕಸನ ಕುರಿತ ಮೊದಲ ವಿಶೇಷ ತರಬೇತಿ ಕಾರ್ಯಕ್ರಮ ಕಾಬೆಟ್ಟು ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಿತು.

ತರಬೇತಿಯನ್ನು ಜೆಸಿಐ ಇಂಡಿಯಾ ರಾಷ್ಟ್ರೀಯ ತರಬೇತುದಾರಾದ ಡಾ.ವಿಜಯ್ ನೆಗಳೂರ್ ನಡೆಸಿಕೊಟ್ಟರು. ತರಬೇತಿಯಲ್ಲಿ 110 ವಿದ್ಯಾರ್ಥಿಗಳಿಗಳು ಪಾಲ್ಗೊಂಡು ಆರೋಗ್ಯಕರ ಆಹಾರ ಪದ್ಧತಿ, ಸಕಾರಾತ್ಮಕ ಜೀವನ ಶೈಲಿ, ಶಿಸ್ತಿನ ನಡೆ-ನುಡಿ ಹಾಗೂ ಒಳ್ಳೆಯ ಚಿಂತನೆಗಳ ಮಹತ್ವವನ್ನು ಅನುಭವಾತ್ಮಕ ಚಟುವಟಿಕೆಗಳ ಮೂಲಕ ಕಲಿತುಕೊಂಡರು.

ಈ ಸಂದರ್ಬದಲ್ಲಿ ಜೆಸಿಐ ಕಾರ್ಕಳ ರೂರಲ್ ಅಧ್ಯಕ್ಷರಾದ ಜೆಸಿ ಅರುಣ್ ಮಾಂಜ, ಕಾಲೇಜು ಪ್ರಾಂಶುಪಾಲರಾದ ಡಾ.ಸುರೇಶ್ ರೈ ಕೆ, Placement cell ಸಂಯೋಜಕರಾದ ಡಾ.ಸುಬ್ರಮಣ್ಯ ಕೆ.ಸಿ, IQAC ಸಂಯೋಜಕರಾದ ವಿನಯ್ ಎಮ್.ಎಸ್, ಜೆಸಿಐ ಕಾರ್ಕಳ ರೂರಲ್ ಪೂರ್ವಧ್ಯಕ್ಷರಾದ ಜೆಸಿ ಮೋಹನ್ ನಕ್ರೆ, ಜೆಸಿ ವೀಣಾ ರಾಜೇಶ್, ಸದಸ್ಯರಾದ ಶ್ವೇತಾ ಅರುಣ್,ಜೆಜೆಸಿ ದಿಯಾ ರಾಜೇಶ್ ಭಂಡಾರಿ, ಜೆಜೆಸಿ ರಕ್ಷಣ್ ಭಾಗವಹಿಸಿದ್ದರು.

 

 

 

 

 

 

  

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

  

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *