
ಕಾರ್ಕಳ, ಜ.26: ರಸ್ತೆ ದಾಟಲೆಂದು ನಿಂತಿದ್ದ ವ್ಯಕ್ತಿಗೆ ಕಾರು ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಾರ್ಕಳ ತಾಲೂಕಿನ ಜೋಡುರಸ್ತೆ ಕುಲಾಲ್ ಮಂದಿರದ ಬಳಿ ಶನಿವಾರ ರಾತ್ರಿ ನಡೆದಿದೆ.
ಕೇರಳ ಮೂಲದ ಸೂರ್ಯನ್ ಎಂಬ ಅರ್ಥವನ್ನು ನೀಡುತ್ತವೆ ವ್ಯಕ್ತಿ ಕಳೆದ 3 ದಿನಗಳ ಹಿಂದೆ ಕಾರ್ಕಳಕ್ಕೆ ಬಂದಿದ್ದು, ಶನಿವಾರ ರಾತ್ರಿ ಜೋಡುರಸ್ತೆ ಬಳಿ ರಸ್ತೆ ದಾಟಲೆಂದು ನಿಂತಿದ್ದ ವೇಳೆ ಕಾರ್ಕಳ ಕಡೆಯಿಂದ ಬಂದ ಮೊಹಮ್ಮದ್ ಹನೀಫ್ ಎಂಬವರ ಕಾರು ಡಿಕ್ಕಿಯಾಗಿದೆ.
ಅಪಘಾತದ ಪರಿಣಾಮ ಸೂರ್ಯನ್ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು ಅವರಿಗೆ ಕಾರ್ಕಳ ಟಿಎಂಎಪೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಬಳಿಕ ಮಣಿಪಾಲ ಕೆಎಂಸಿ ಗೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಕೆಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

.
.
.
.
