
ಹೆಬ್ರಿ,ಡಿ. 16:ರಾಷ್ಟ್ರೀಯ ಕಬ್ಬಡಿ ಆಟಗಾರ ಮುಟ್ಲುಪಾಡಿ ಪ್ರೀತಮ್ ಶೆಟ್ಟಿಯವರ ಪ್ರಥಮ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಪ್ರೀತಂ ಶೆಟ್ಟಿ ಅಭಿಮಾನಿ ಬಳಗ ಮುನಿಯಾಲು ಇವರಿಂದ ಸಾಧಕ ಕ್ರೀಡಾಪಟುಗಳಿಗೆ ಸನ್ಮಾನ ಹಾಗೂ ಶಾಲೆಗಳಿಗೆ ಮೈಕ್ ಹಾಗೂ ಇನ್ವರ್ಟರ್ ಕೊಡುಗೆಯಾಗಿ ನೀಡಲಾಯಿತು.
ರಾಷ್ಟ್ರೀಯ ಹೈ ಜಂಪ್ ತಾರೆ ಸುದೀಪ್ ಶೆಟ್ಟಿಗಾರ್ ಹಾಗೂ ಕಬಡ್ಡಿ ಪಟು ವಿಪುಲ್ ಶೆಟ್ಟಿ ಯವರಿಗೆ ಸನ್ಮಾನಿಸಲಾಯಿತು.
ಸ ಹಿ ಪ್ರಾ ಶಾಲೆ ಮುಟ್ಲುಪಾಡಿಯ ಗೌರವ ಶಿಕ್ಷಕಿಗೆ ಗೌರವ ಧನ , ಮುನಿಯಾಲು ಕರ್ನಾಟಕ ಪಬ್ಲಿಕ್ ಸ್ಕೂಲ್ ಗೆ ಪ್ರೇಯರ್ ಮೈಕ್ ಕೊಡುಗೆ ,ಕಾರ್ಕಳ ಚೇತನಾ ವಿಶೇಷ ಶಾಲೆಗೆ ಇನ್ವರ್ಟರ್ ಕೊಡುಗೆಯಾಗಿ ನೀಡಿ ಪ್ರೀತಂ ಶೆಟ್ಟಿಯವರ ಸ್ಮರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ರಮೇಶ್ ನಾಯರ್, ಉದ್ಯಮಿ ದಿನೇಶ್ ಪೈ , ವಿಖ್ಯಾತ್ ಶೆಟ್ಟಿ , ಪ್ರಕಾಶ್ ಶೆಟ್ಟಿ ಸಮೃದ್ಧಿ , ರಾಮಚಂದ್ರ ನಾಯಕ್ , ಡಾ . ಸುದರ್ಶನ್ ಹೆಬ್ಬಾರ್ , ಸುಹಾಸ್ ಶೆಟ್ಟಿ ಮುಟ್ಲುಪಾಡಿ , ಕೌಶಿಕ್ ಅಮೀನ್ ಮುನಿಯಾಲು , ಸುರೇಂದ್ರ ವರಂಗ , ರಾಕೇಶ್ ಶೆಟ್ಟಿ ಕುಕ್ಕುಂದೂರು ಮುಂತಾದವರು ಉಪಸ್ಥಿತರಿದ್ದರು
.
.
