ಹೆಬ್ರಿ : ಕಬ್ಬಿನಾಲೆ ಮಲೆಕುಡಿಯ ಸಂಘದ ಸಕ್ರಿಯ ಸದಸ್ಯರಾಗಿ ಮೇಲ್ಮಠ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಹಾಗೂ ಗ್ರಾಮದಲ್ಲಿ ನಡೆಯುವ ನಾನಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸ್ವಯಂಸೇವಕರಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಗೋಪಾಲ ಗೌಡ ಮತ್ತು ವಿದ್ಯುತ್ ಸಂಬಂಧಿತ ಕೆಲಸಕಾರ್ಯಗಳಲ್ಲಿ ಸಹಾಯಕರಾಗಿ ಕೆಲಸ ನಿರ್ವಹಿಸುವ ಹರೀಶ ಗೌಡ ಅವರನ್ನು ಇತ್ತೀಚೆಗೆ ಮೇಲ್ಮಠ ಲಕ್ಷ್ಮಿನಾರಾಯಣ ಸಭಾಭವನದಲ್ಲಿ ನಡೆದ ಕಾರ್ಯಕಮದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಗಣೇಶೋತ್ಸವ ಸಮಿತಿ ಅಧ್ಯಕ್ಷ ಸುಕುಮಾರ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ರಾಮಚಂದ್ರ ಭಟ್, ಧಾರ್ಮಿಕ ಉಪನ್ಯಾಸ ನೀಡಿದ ಕವಿ, ಬರಹಗಾರ ಶ್ರೀಕರ ಭಾರದ್ವಾಜ್, ಮಲೆಕುಡಿಯ ಸಂಘದ ಅಧ್ಯಕ್ಷ ರಾಜು ಗೌಡ, ಗಣೇಶೋತ್ಸವ ಸಮಿತಿಯ ಪೂರ್ವಾದ್ಯಕ್ಷರಾದ ನಾಗಭೂಷಣ ಹೆಬ್ಬಾರ್, ಜ್ಞಾನೇಶ್ವರ ಹೆಬ್ಬಾರ್, ಶಶಿಧರ ಹೆಬ್ಬಾರ್, ರಾಧಾಕೃಷ್ಣ ಹೆಬ್ಬಾರ್, ಕಾರ್ಯದರ್ಶಿ ಪರಮೇಶ್ವರ ಹೆಬ್ಬಾರ್, ಬಾಲಕೃಷ್ಣ ಹೆಬ್ಬಾರ್ ಪೇರಳ, ಬಾಲಚಂದ್ರ ಹೆಬ್ಬಾರ್ ಮೊದಲಾದವರಿದ್ದರು.
ಕಬ್ಬಿನಾಲೆ ಮೇಲ್ಮಠ ಗಣೇಶೋತ್ಸವ ಸಮಿತಿಯ ವತಿಯಿಂದ ಗ್ರಾಮಸ್ಥರಿಗೆ ವಿವಿಧ ಸ್ಪರ್ಧೆ ಏರ್ಪಡಿಸಿ, ಬಹುಮಾನ ವಿತರಿಸಲಾಯಿತು. ಸಮಿತಿಯ ಕೆ. ರಾಮಚಂದ್ರ ಭಟ್ ವರಂಗ ನಿರೂಪಿಸಿ, ಮುಕ್ತಾ ಹೆಬ್ಬಾರ್ ವಂದಿಸಿದರು.







in 
