Share this news

ಕಾರ್ಕಳ: ಕಾರ್ಕಳ ತಾಲೂಕು ನೀರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಣಜಾರು ಗ್ರಾಮದ ಗ್ರಾಮಸ್ಥರು ತಮ್ಮ ಪಡಿತರ ವ್ಯವಸ್ಥೆಗಾಗಿ ದೂರದ ಬೈಲೂರು ಅವಲಂಬಿಸಿದ್ದರು. ಹಲವಾರು ಬಾರಿ ಪಂಚಾಯತ್ ಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಇದೀಗ ನೂತನ ಪಡಿತರ ಕೇಂದ್ರ ಆರಂಭಗೊಂಡಿದ್ದು, ಕಾರ್ಕಳದ ಶಾಸಕರಾದ ವಿ ಸುನಿಲ್ ಕುಮಾರ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಪಂಚಾಯತ್ ಅಭಿವೃದ್ಧಿ ಕಾರ್ಯವನ್ನು ಶ್ಲಾಘಿಸಿ, ಗ್ರಾಮದ ಜನರ ಸಹಭಾಗಿತ್ವದಲ್ಲಿ ಇನ್ನಷ್ಟು ಉತ್ತಮ ಜನಸ್ನೇಹಿ ಕೆಲಸವನ್ನು ಮಾಡುವಂತೆ ಪಂಚಾಯತ್ ಆಡಳಿತಕ್ಕೆ ಕರೆ ನೀಡಿದರು.

ತಹಸೀಲ್ದಾರ್ ಶ್ರೀಮತಿ ಪ್ರತಿಭಾ ಮಾತನಾಡಿ, ನೀರೆ ಗ್ರಾಮ ಪಂಚಾಯತ್ ಉತ್ತಮ ಕಾರ್ಯವನ್ನು ಮಾಡಿಕೊಂಡು ಬರುತ್ತಿದ್ದು ಪಡಿತರ ವ್ಯವಸ್ಥೆ ನಿಜವಾಗಿ ಉತ್ತಮ ಜನಸ್ನೇಹಿ ಕಾರ್ಯಕ್ರಮ ಎಂದು ಸಂತಸ ವ್ಯಕ್ತಪಡಿಸಿದರು.

ಕಾರ್ಕಳ ತಾಲೂಕ್ ಪಂಚಾಯತ್ ಮಾಜಿ ಅಧ್ಯಕ್ಷ ವಿಕ್ರಂ ಹೆಗ್ಡೆ ಮಾತನಾಡಿ, ಗ್ರಾಮದ ಅಭಿವೃದ್ಧಿಗೆ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಸಹಕಾರ ನೀಡಿದರೆ ಅಭಿವೃದ್ಧಿ ಖಂಡಿತ ಸಾಧ್ಯವೆಂದರು.

ನೀರೆ ಗ್ರಾಮ ಪಂಚಾಯತ್ ಅಧ್ಯಕ್ಷ ಸಚ್ಚಿದಾನಂದ ಪ್ರಭು ಪಂಚಾಯತ್ ಸದಸ್ಯರ ಒಗ್ಗಟಿನಿಂದ ಮೇಲಧಿಕಾರಿಗಳ ಪ್ರೋತ್ಸಾಹದಿಂದ ಸಿಬ್ಬಂದಿ ಗಳ ಪರಿಶ್ರಮದಿಂದ ಈ ಎಲ್ಲ ಅಭಿವೃದ್ಧಿ ಕಾರ್ಯವಾಗುತ್ತಿದೆ ಎಂದರು.

ಈ ಸಂದರ್ಭ ಕಟ್ಟಡದ ನಿರ್ಮಾಣ ಕಾರ್ಯವನ್ನು ಕ್ಲಪ್ತ ಸಮಯದಲ್ಲಿ ಮಾಡಿದ ಗುತ್ತಿಗೆ ದಾರರಾದ ಪ್ರದೀಪ್ ಹಾಗೂ ಪಡಿತರ ಕೇಂದ್ರದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಕಲ್ಪಿಸಿದ ಆಹಾರ ಡಿ ಟಿ ಶನವಜ್ ಹಾಗೂ ಆಹಾರ ನಿರೀಕ್ಷಕರಾದ ಶ್ರೀಮತಿ ಸುಮತಿ ರವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ನೀರೆ ಪಂಚಾಯತ್ ಉಪಾಧ್ಯಕ್ಷರಾದ ವಿದ್ಯಾ ಶೆಟ್ಟಿ, ಪಂಚಾಯತ್ ಸರ್ವ ಸದಸ್ಯರು, ಕಾರ್ಕಳ ತಾಲೂಕ್ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಾನಂದ , ಕಣಜಾರು ಬ್ರಹ್ಮಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಸುದೀರ್ ಹೆಗ್ಡೆ , ತಾಲೂಕು ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಮಾಲಿನಿ ಶೆಟ್ಟಿ, ನೀರೆ ಬೈಲೂರು ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರುಗಳು, ವ್ಯವಸ್ಥಾಪಕರಾದ ಸಂತೋಷ್, ಸಿಬ್ಬಂದಿಗಳು ಹಾಗೂ ನೀರೆ ಪಂಚಾಯತ್ ಸರ್ವ ಸದಸ್ಯರು, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಜನಪ್ರತಿನಿಧಿ ಗಳು, ಗ್ರಾಣಕರಣಿಕರದ ಶ್ರೀಮತಿ ಸುಚಿತ್ರ, ಗ್ರಾಮದ ವಿವಿಧ ಸಂಘ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು, ಗ್ರಾಮದ ಆಶ , ಅಂಗನವಾಡಿ, ಶ್ರೀ ಶಕ್ತಿ, ಸಂಜೀವಿನಿ ಸಂಘದ ಸದಸ್ಯರು, ಹಲವಾರು ಸಂಖ್ಯೆಯಲ್ಲಿ ಗ್ರಾಮದ ಗ್ರಾಮಸ್ಥರು ಹಾಜರಿದ್ದರು.

ನೀರೆ ಬೈಲೂರು ವ್ಯವಸಾಯ ಸೇವಾ ಸಹಕಾರಿ ಸೇವಾ ಸಂಘದ ಅಧ್ಯಕ್ಷರಾದ ರವೀಂದ್ರ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಂಕಿತ ನಾಯಕ್ ಸ್ವಾಗತಿಸಿದರು.
ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ರಮೇಶ್ ಕಲ್ಲೊಟ್ಟೆ ಕಾರ್ಯಕ್ರಮ ನಿರೂಪಿಸಿದರು. ಸದಸ್ಯ ಶಿವಪ್ರಸಾದ ರಾವ್ ವಂದಿಸಿದರು.

 

                       in 

                          

                        

                       

Leave a Reply

Your email address will not be published. Required fields are marked *